Skip to main content

Posts

Showing posts from May, 2018

'ಕನ್ನಡದ ಕಸ್ತೂರಿ,ಹೊಸಗನ್ನಡದ ಬೆಳ್ಳಿಚುಕ್ಕಿ-ಮುದ್ದಣ'(24 ಜನೇವರಿ 1870ರಿಂದ 1901)

ಸಾಹಿತ್ಯವೇ ಜೀವನ ಎಂಬಂತೆ ಬದುಕಿದ, ಸಾಹಿತ್ಯಕ್ಕಾಗಿ ಈ ಶರೀರ ಎಂಬಂತೆ ಬಾಳಿದ, ಕನ್ನಡ ಸಾಹಿತ್ಯ ಜಗತ್ತಿನಲ್ಲಿ ಪ್ರಾಚೀನತೆ-ಆಧುನಿಕತೆಗಳ ಸೇತುವೆಯೆಂದೂ, ಹೊಸಗನ್ನಡದ ಬೆಳ್ಳಿಚುಕ್ಕಿ, ನವೋದಯದ ಮುಂಗೋಳಿ,  ಹೊಸಗನ್ನಡದ ಕಾವ್ಯೋದ್ಯಾನದಲ್ಲಿ ಮೊದಲು ಕೂಗಿದ ಕೋಗಿಲೆಯೆಂದು ಕೊಂಡಾಡಲ್ಪಟ್ಟ ಕನ್ನಡಿಗರ ಹೆಮ್ಮೆಯ ಕವಿ "ಮುದ್ದಣ" ಎಂಬ ಮುದ್ದಾದ ಕಾವ್ಯನಾಮದಿಂದಲೇ ಪರಿಚಿತನಾದ ನಂದಳಿಕೆ ಲಕ್ಷ್ಮೀ ನಾರಾಯಣನ ಬಗ್ಗೆ ಬರೆಯಲು ಅತೀವವಾದ ಹೆಮ್ಮೆ ಎನಿಸುತ್ತದೆ.  24ನೇ ಜನೇವರಿ 1870 ರಂದು ಇಂದಿನ ದಕ್ಷಿಣ ಕನ್ನಡ ಜಿಲ್ಲೆಯ ಕಾರ್ಕಳ ತಾಲ್ಲೂಕಿನ ನಂದಳಿಕೆಯಲ್ಲಿ ಮುದ್ದಣ ಜನಿಸಿದ.  ತಂದೆ ತಮ್ಮಯ್ಯ, ತಾಯಿ ಮಹಾಲಕ್ಷ್ಮೀ, ತುಂಬ ಬಡಕುಟುಂಬ. ಮುದ್ದಣನ ನಿಜನಾಮ ಲಕ್ಷ್ಮೀನಾರಾಯಣ , ಬಾಲ್ಯದಲ್ಲಿ ಮುದ್ದಿನಿಂದ ಮುದ್ದಣ ಎಂದೇ ಕರೆಯುತ್ತಿದ್ದರು. ಬಾಲ್ಯದಲ್ಲಿ ಆತನಿಗೆ ಯಕ್ಷಗಾನ, ಹರಿಕಥೆ, ಸಂಗೀತಗಳಲ್ಲಿ ಅತೀಯಾದ ಪ್ರೀತಿ. ಇವೆಲ್ಲ ಅತೀರೇಖಗಳಿಂದ ತಂದೆಯಿಂದ ಏಟುಗಳನ್ನೂ ತಿನ್ನುತ್ತಿದ್ದ. ಇವೆಲ್ಲ ಆಸಕ್ತಿಗಳೊಂದಿಗೆ ಓದಿನಲ್ಲೂ ಮುಂದಿದ್ದ. ಕಿತ್ತು ತಿನ್ನುವ ಬಡತನದಿಂದಾಗಿ ಪ್ರಾಥಮಿಕ ಶಿಕ್ಷಣದ ನಂತರ ಶಾಲೆ ಬಿಟ್ಟ. ಅಂದು ಮುಂದಿನ ವಿದ್ಯಾಭ್ಯಾಸಕ್ಕೆ ಉಡುಪಿಗೆ ಹೋಗಬೇಕಿತ್ತು, ಒಂದು ಹೊತ್ತಿನ ಊಟಕ್ಕೂ ತತ್ವಾರ ಪಡುವ ಕುಟುಂಬಕ್ಕೆ ಆಸಕ್ತಿಯಾಗಲಿ ಆ ಶಕ್ತಿಯಾಗಲಿ ಇರಲಿಲ್ಲ. ಕೆಲ ದಿನ ಕೂಲಿ ಕೆಲಸ ಮಾಡಿದ ಆತನಲ್ಲಿ ಮತ್ತೇ ಕಲಿಯಬೇಕೆಂಬ ಆಸೆ