Skip to main content

Posts

Showing posts from May, 2019

ನಗುವುದೋ, ಅಳುವುದೋ ನೀವೇ ಹೇಳಿ!

 ಇಡೀ ಜಗತ್ತೇ ವಿಜ್ಞಾನ, ತಂತ್ರಜ್ಞಾನ, ವೈಚಾರಿಕತೆ, ವೈಜ್ಞಾನಿಕತೆಯೆಡೆಗೆ ಬಹಳ ತೀವ್ರಗತಿಯಲ್ಲಿ ತೆರೆದುಕೊಳ್ಳುತ್ತಿದೆ. ಪ್ರತಿ ಮಿಲಿ ಸೆಕೆಂಡುಗಳಿಗೂ ತಳಮಟ್ಟದ ಮಾನವ ಜೀವನವನ್ನು ಸುಗಮಗೊಳಿಸಬಲ್ಲ ಸಂಶೋಧನೆಗಳಾಗುತ್ತಿವೆ. ಬದಲಾವಣೆ ಜಗದ ನಿಯಮ, ಜೀವಂತಿಕೆಯ ಲಕ್ಷಣ. ಬದಲಾವಣೆಗೆ ಸ್ಪಂದಿಸದಿರುವಿಕೆ ಜೀವಂತಿಕೆಯ ಲಕ್ಷಣವೇ ಅಲ್ಲ. ಬದಲಾಗದ ಸಮಾಜ ಅವನತಿಯತ್ತ ಸಾಗುತ್ತಿರುವ ಅಥವಾ ಕಾಲಚಕ್ರದಲ್ಲಿ ಹಿಮ್ಮುಖವಾಗಿ ಚಲಿಸುತ್ತಿರುವ ಸಂಕೇತ. ಮಾನವ ಜೀವಿಯ ಪ್ರತಿ ತಲೆಮಾರು ಸಾಧ್ಯವಾದಷ್ಟು ನಾಗರಿಕತೆ ಅಥವಾ ಮಾನವೀಯತೆಯನ್ನು ಗಳಿಸುತ್ತ ಈಗಿರುವ ಮಟ್ಟಕ್ಕೆ ಬಂದು ತಲುಪಿದೆ.ಅಂದರೆ ಮುಮ್ಮುಖ ಚಲನೆ ಎಂಬುದು ಸಾಧ್ಯವಾದಷ್ಟು ಜೀವಪರ. ಬಹಳ ವಿಷಾಧದ ಸಂಗತಿಯೇನೆಂದರೆ ಹಿಮ್ಮುಖವಾಗಿ ಅಥವಾ ಅನಾಗರೀಕತೆಯೆಡೆಗೆ ತಲುಪಲು ಹವಣಿಸುತ್ತಿರುವ ಜಗತ್ತು ಕೂಡ ಇದೆ. ಈ ಹವಣಿಕೆಗೆ ವೇಗವರ್ಧಕವಾಗಿ ವಿಕೃತ, ವಿಕ್ಷಿಪ್ತ ರಾಜಕೀಯ ವ್ಯವಸ್ಥೆಯೂ ಇರುತ್ತದೆ. ಈ ವಿಕ್ಷಿಪ್ತ ಮತ್ತು ವಿಕೃತ ರಾಜಕೀಯ ವ್ಯವಸ್ಥೆ ಸಮಾಜವನ್ನು ತಾನಿರುವ ಮಟ್ಟದಿಂದ ಒಂದು ಹೆಜ್ಜೆ ಮುಂದೆ ಹೋಗಿ ಯೋಚಿಸುವುದನ್ನು ಯಾವ ಕಾರಣಕ್ಕೂ ಸಹಿಸುವುದಿಲ್ಲ. ಬದಲಾಗಿ ಮತ್ತೆ ಹಿಮ್ಮುಖವಾಗಿ ತಳ್ಳುತ್ತದೆ. ಸಮಾಜದ ಮುಮ್ಮುಖ ಚಲನೆ ತನ್ನ ಹಿಡೆನ್ ಅಜೆಂಡಾಗಳಿಗೆ ಎಲ್ಲಿ ಮುಳುವಾಗಿಬಿಡುತ್ತದೋ ಎಂಬ ಭಯವೇ ಇದಕ್ಕೆ ಕಾರಣ. ಚರಿತ್ರೆಯ ಚಿತಾಭಸ್ಮವನ್ನು ಕೆದಕಿ ರಾಮ,ರಾವಣ, ಬಾಬರ, ಟಿಪ್ಪು,  ನೆಹರು, ಗಾಂಧಿ, ಜಿನ್ನಾ