Skip to main content

Posts

Showing posts from November, 2018

ಈಸಬೇಕು, ಇದ್ದು ಜೈಸಬೇಕು!!

ನನಗೆ ಕೆಲವೊಬ್ಬರು ಹೇಳ್ತಿರ್ತಾರೆ "ಅವನು ಪರೀಕ್ಷೆಯಲ್ಲಿ ಫೇಲಾದ", ನನ್ನ ಪ್ರಶ್ನೆ "ಪ್ರತಿಸಲ ಪಾಸಾಗಬೇಕಂತ ಏನಾದ್ರೂ ರೂಲ್ ಇದೆಯಾ?" ಕೆಲವರು ಹೇಳ್ತಾರೆ" ನನ್ನ ಹುಡುಗ/ಹುಡುಗಿ ಬಿಟ್ಟೋದನು/ಳು", ಆಗ ನನ್ನ ಪ್ರಶ್ನೆ" ಅಲ್ಲ ಸ್ವಾಮಿ ಎಲ್ಲ ಕಡೆ ಯಶಸ್ವಿ ಸಂಬಂಧಗಳೇ ಇರಬೇಕಂತ ರೂಲ್ ಏನಾದ್ರೂ ಇದೆಯಾ?" ಕೆಲವರು ಕೇಳ್ತಾರೆ "ಯಾಕೆ ಖಿನ್ನನಾಗಿದಿಯಾ?" ನನ್ನ ಪ್ರಶ್ನೆ "ಯಾವಾಗ್ಲೂ ನಗ್ತಾನೇ ಇರಬೇಕಂತ ರೂಲ್ ಇದೆಯಾ?" ಕೆಲವರು ಅಳ್ತಾರೆ "ನನ್ನ ತೀರ್ಮಾನ ಸರಿಯಾಗಿರಲಿಲ್ಲ?" ಆಗ "ಎಲ್ಲ ತೀರ್ಮಾನಗಳನ್ನು ಸರಿಯಾಗಿಯೇ ತೆಗೆದುಕೊಳ್ಳಲಿಕ್ಕೆ ಸಾಧ್ಯಾನಾ?" ಏನಂತ ಅಂದರೆ ನಮ್ಮ ಜೀವನ ಯಾವಾಗಲೂ ಪರಿಪೂರ್ಣ/ಶಾಶ್ವತವಾಗಿ ಇರಬೇಕೆಂಬ ನಿರೀಕ್ಷೆ ನಮ್ಮ ಅಸಂತೋಷಕ್ಕೆ ಬಹುದೊಡ್ಡ ಕಾರಣ, ಈ ಸೃಷ್ಟಿಯಲ್ಲಿ ಯಾವುದೂ ಶಾಶ್ವತವಲ್ಲ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು. ಪ್ರತಿ ಕಗ್ಗತ್ತಲ ಇರುಳಿನ ನಂತರವೂ ಪ್ರಕಾಶಮಾನವಾದ ಹಗಲಿದೆ, ಪ್ರತಿ ಸಾವಿಗೂ ಬದಲಾಗಿ ಹೊಸ ಹುಟ್ಟಿದೆ, ಪೂರ್ಣಚಂದ್ರನ ಉದಯದ ಮೊದಲು ಶೂನ್ಯದಿಂದ ಆರಂಭವಾಗುವ  ಹಂತಗಳಿವೆ, ಸೃಷ್ಟಿಯ ಅಪರಿಪೂರ್ಣತೆಯಲ್ಲೂ ನಮಗರ್ಥವಾಗದ ಪರಿಪೂರ್ಣತೆ ಅಡಗಿದೆ, ಆದ್ದರಿಂದ ನಾವು ನಮ್ಮ ಬದುಕಿನ ಕೆಟ್ಟ /ಅಪರಿಪೂರ್ಣ ಅಂಶಗಳನ್ನೇ ತೀರಾ ಹಚ್ಚಿಕೊಳ್ಳಬಾರದು. ದೇವರಿಗೂ ಕೂಡ ನಿಮಗೆ ಕೆಟ್ಟದ್ದು ಮಾಡಬೇಕೆಂಬ ಮನ

💚ಕನ್ನಡತಿ ಮತ್ತು ಕರುನಾಡ ಯೋಧ💜

ರಣರಂಗದೀ ಕಾದಾಡಿ ಜಲದಾಹದೀಂ ಬಂದನ್ ಕರುನಾಡ ಯೋಧ ಶ್ವೇತಾಶ್ವವಂ ಪೇರಿ! ಮೊದಲೇ ಬಿಸಿಲುಗಾಲ ಸುಡುವ ಸೂರ್ಯ ನಾಡಿಗಾಗಿ ಹೋರಾಡಿ ಬಳಲಿ ಬೆಂಡಾದ ಯೋಧ ಬಯಲುಸೀಮೆಯಲ್ ನೀರ ಅದಾವ ಮೂಲಗಳಿಲ್ಲ ಬತ್ತಿ ಬಿರುಕು ಬಿಟ್ಟಿವೆಯಲ್ಲ ಬಿಸಿಲ ಹೊಡೆತಕ್ಕೆ ಇಂತಿರುವಾಗ ದೂರದಲ್ಲಿ ದೊಡ್ಡದಾದೊಂದು ಬೇವಿನ ಗಿಡದಡಿಗೆ ಸುಂದರವಾದೊಂದು ಗುಡಿಸಲು ತವಕಿಸುತ ಸಾಗಿದ ಯೋಧ ಗುಡಿಸಲ ಬಳಿಗೆ ಕೂಗಿದ "ನೀರು ಕೊಡುವಿರ ತುಸು ಇಲ್ಲದಿರೇ ಸಾಯುವೆ" ಕೂಗು ಕೇಳಿದ ತರುಣಿಯೋರ್ವಳ್ ಹೊರಬಂದು ನೋಡಿದರೆ ತ್ರಾಣವಿಲ್ಲದೇ ಕುಸಿದು ಬಿದ್ದಿರುವ ಯೋಧ ವಿಳಂಬಿಸದೇ ಆ ಕನ್ನಡತಿ ತಂದಳ್ ತಂಪಾದ ಮಜ್ಜಿಗೆಯ ಕೊಟ್ಟಳ್ ಅವನಿಗೆ ವಾತ್ಸಲ್ಯವ ಬೆರೆಸಿ, ಕುಡಿದ ಯೋಧ ಯೋಧನ ಶ್ವೇತಾಶ್ವಕ್ಕೂ ಕರುಣಿಸಿದಳು ನೀರು-ಆಹಾರ ಯೋಧನಲ್ಲೀಗ ಶಕ್ತಿಯ ಸಂಚಲನ ತರುಣಿಗೆ ರೋಮಾಂಚನ ಕ್ಷಣ ಹೊತ್ತಿನವರೆಗೆ ಮಾತು-ಮಂಥನ ರಣರಂಗದ ಚಿತ್ರಣ ತರುಣಿಯಿಂದ ಪ್ರೇಮ ನಿವೇದನ ಕನ್ನಡತಿಯ ಅಭಿಮಾನಕ್ಕೆ ಕೈ ಮುಗಿದ ವೀರಯೋಧ ಹೇಳಿದನಂತ ಧನ್ಯವಾದ ಹೊರಡಲಣಿಯಾದ ತರುಣಿಯ ಕಣ್ಣಲ್ಲಿ ಪ್ರೇಮ ಭಾಷ್ಪ ಗುರುತಿಸಿದ ಯೋಧ ರಣರಂಗದಲೀ ಬದುಕಿದರೆ ಮತ್ತೆ ಬರುವೆನೆಂದ್ ಮುತ್ತಿಕ್ಕಿದ ಆಕೆಯ ಕೈಗೆ "ಇದು ಇಳಿಸಂಜೆ ಹೊತ್ತು ಇರಬಹುದು ತಾವಿವತ್ತು ವಿಶ್ರಮಿಸಿ ಹೋಗಬಹುದಲ್ಲ ನಾಳೆ" ಎಂದಳವಳು ಕಾಳಜಿಯಿಂದ "ಇಲ್ಲ ತರುಣಿ ಧನ್ಯವಾದ ಆಪತ್ತಿದೆ