Skip to main content

Posts

Showing posts from August, 2018

ಸುಟ್ಟಿದ್ದು ಸಂವಿಧಾನವನ್ನಲ್ಲ;ನಿಮ್ನಿಮ್ಮ ಮೂಲಭೂತ ಹಕ್ಕುಗಳನ್ನು ಮತ್ತು ಆತ್ಮಸಾಕ್ಷಿಯನ್ನೂ... !!

ಸುದ್ದಿಯಲ್ಲದ ಸುದ್ದಿಯನ್ನು ಸುದ್ದಿ ಮಾಡುವ ಮನುವ್ಯಾಧಿ ಮಿಡಿಯಾಗಳಿಗೆ ಮನುವಾದಿಗಳು ಸಂವಿಧಾನವನ್ನು ಸುಟ್ಟಿದ್ದು ಸುದ್ದಿಯಾಗಲೇ ಇಲ್ಲ, ಬಹುಶಃ ಒಳಗೊಳಗೆ ಖುಷಿಯಾಗಿ ಒಂದೆರಡು ಲೀಟರ್ ಗೋಮೂತ್ರ, ಎರಡ್ಮೂರು ಬುಟ್ಟಿ ಸೆಗಣಿಯನ್ನು ಜಾಸ್ತಿ ತಿಂದಿರಬೇಕು. ಅಷ್ಟಕ್ಕೂ ಸಂವಿಧಾನವನ್ನು ಯಾವ ಕಾರಣಕ್ಕೆ ಈ ಶತಮೂರ್ಖರು ಸುಟ್ಟರೆಂಬುದೇ ಮಿಲಿಯನ್ ಡಾಲರ್ ಪ್ರಶ್ನೆ. ಜಗತ್ತಿನ ಅತಿದೊಡ್ಡ ಸಾಮಾಜಿಕ ದಾಖಲೆ, ಭಾರತ ಪ್ರಜಾಪ್ರಭುತ್ವದ ಭದ್ರ ಬುನಾದಿ, ಭಾರತ ಆಡಳಿತದ ಜೀವನ ಮಾರ್ಗ, ಎಲ್ಲಕ್ಕಿಂತ ಹೆಚ್ಚಾಗಿ ಎಲ್ಲ ಭಾರತೀಯರಿಗೂ ಘನತೆಯ ಬದುಕು ಬದುಕಲು ಅವಶ್ಯಕವಾದ ಮೂಲಭೂತ ಹಕ್ಕುಗಳನ್ನೂ, ಜನತೆಯ ಕಲ್ಯಾಣಕ್ಕೆ ಅವಶ್ಯಕವಾದ ರಾಜ್ಯನೀತಿ ನಿರ್ದೇಶಕ ತತ್ವಗಳನ್ನೂ, ಒಂದರೊಂದರ ಮೇಲೆ ಸವಾರಿ ಮಾಡದ ಕಾರ್ಯಾಂಗ, ಶಾಸಕಾಂಗ, ನ್ಯಾಯಾಂಗಗಳನ್ನೂ, ವಿವಿಧ ಸಾಂವಿಧಾನಿಕ ಹುದ್ದೆಗಳು ಮತ್ತು ಸಂಸ್ಥೆಗಳು ಮತ್ತವುಗಳ ಜವಾಬ್ದಾರಿಗಳನ್ನೂ, ಒಕ್ಕೂಟ ವ್ಯವಸ್ಥೆಯನ್ನೆಲ್ಲ ವ್ಯಾಖ್ಯಾನಿಸಿ, ದಾಖಲಿಸಿ, ವಿವರಿಸಿರುವ ಸಂವಿಧಾನ ಸುಟ್ಟವರಿಗೆ ಬಗೆದ ಅಪಚಾರವಾದರೂ ಏನು?? ಮೊದಲು ಮನುಸ್ಮೃತಿಯೂ, ಮಧ್ಯಕಾಲದಲ್ಲಿ ಮುಸಲ್ಮಾನರ ಆಡಳಿತವೂ, ತದನಂತರ ಬ್ರಿಟಿಷರ ಆಡಳಿತವೂ ಭಾರತದ ಆಡಳಿತ ಜೀವನವಿಧಾನವನ್ನು ನಿರ್ಧರಿಸಿ ಭಾರತೀಯರ ಬದುಕನ್ನು, ನಿರ್ಧಿಷ್ಟವಾಗಿ ಸಮಾಜದ ತಳಸಮುದಾಯ, ವರ್ಗಗಳನ್ನು ಅಸಹನೀಯವಾಗಿಸಿದ್ದನ್ನು ಭಾರತೀಯ ಇತಿಹಾಸ ದಾಖಲಿಸಿದೆ. ಬುದ್ಧ, ಬಸವನ ಕ್ರಾಂತಿಗಳ ಭಾಗಶಃ ಸಫ

ಬಸವ ತತ್ವಗಳೆಂಬ ಕ್ರಾಂತಿಯ ಬೀಜಗಳು ಮತ್ತವುಗಳ ಮರುವ್ಯಾಖ್ಯಾನದ ಅವಶ್ಯಕತೆ

ಬಸವಣ್ಣನವರನ್ನು ಎತ್ತನ್ನಾಗಿಸಿ ಪೂಜಿಸುತ್ತಿರುವವರ ಬಗ್ಗೆ ತೀವ್ರ ತೆರನಾದ ಅನುಕಂಪವೂ, ಸಿಟ್ಟೂ ಎರಡೂ ಇವೆ. ಈ ತೆರನಾದ ಆಚರಣೆಗಳು, ಬಸವ ತತ್ವಗಳನ್ನು ಮೂಲೆಗುಂಪಾಗಿಸುವ ಮುಂದುವರೆದ ಭಾಗಗಳೂ, ಬಸವನೆಂಬ ಮಹಾಮಾನವತಾವಾದಿಗೆ ಎಸಗುವ ಬಹುದೊಡ್ಡ ಅಪಚಾರಗಳೂ ಎಂದು ನಾನು ಪರಿಭಾವಿಸುತ್ತೇನೆ. ಬಸವಣ್ಣನ ಬಹುಮುಖ ವ್ಯಕ್ತಿತ್ವವನ್ನು ತಲೆಮಾರುಗಳಿಗೆ ಕಟ್ಟಿಕೊಡುವಲ್ಲಿ ಇಡೀ ಸಮಾಜ ಸೋತಿದೆ ಅಥವಾ ಬೇಕೆಂದೇ ಬದಿಗಿರಿಸಿದೆ. ಉದಾಹರಣೆಗೆ ನಾವೋದುತ್ತಿರುವ ಪಠ್ಯ ಪುಸ್ತಕಗಳಲ್ಲಿ ಬಸವಣ್ಣನವರನ್ನು ಕೇವಲ ಶಂಕರ, ರಾಮಾನುಜ, ವಿದ್ಯಾರಣ್ಯರ ಸಾಲಿನಲ್ಲಿ ಬರುವ ಒಬ್ಬ ಸಮಾಜ ಸುಧಾರಕನನ್ನಾಗಿಯೋ ಇಲ್ಲ, ಕೇವಲ ಭಕ್ತಿ ಪಂಥದಲ್ಲಿ ಬರುವ ಭಕ್ತನನ್ನಾಗಿಯೋ ಬಿಂಬಿಸಲಾಗಿದೆಯೇ ವಿನಃ ಬಸವಣ್ಣನ ಬಹುಮುಖ ವ್ಯಕ್ತಿತ್ವವನ್ನು, ಅವರ ಮಾನವತೆ ಪರ ವಿಚಾರಗಳನ್ನು ತೆರೆದಿಡುವಲ್ಲಿನ ಸೋಲು ಅದನ್ನೋದುವ ತಲೆಮಾರುಗಳ ದಿಕ್ಕು ತಪ್ಪಿಸಿದೆ ಮತ್ತು ಅದರ ಪರಿಣಾಮವನ್ನು ನಾವೀಗ ಅನುಭವಿಸುತ್ತಿದ್ದೇವೆ. ಅವರ ಸಾವಿರಾರು ವಚನಗಳೇ ಅವರ ಬಹುಮುಖ ವ್ಯಕ್ತಿತ್ವವನ್ನು ಅನಾವರಣಗೊಳಿಸಿವೆ. ಅವರು ಕೇವಲ ಭಕ್ತಿ ಭಂಡಾರಿಯಲ್ಲ ಅವರಲ್ಲೊಬ್ಬ ನಿಜವಾದ... 1. ಸಮಾಜವಾದಿ 2. ಜಾತ್ಯಾತೀತವಾದಿ 3. ಮಾನವತಾವಾದಿ 4. ಸ್ತ್ರೀವಾದಿ 5. ವಿಚಾರವಾದಿ 6. ಸಮಾಜ ಶಾಸ್ತ್ರಜ್ಞ 7. ರಾಜ್ಯ ಶಾಸ್ತ್ರಜ್ಞ 8. ಪ್ರಜಾಪ್ರಭುತ್ವವಾದಿ 9. ಕಾಯಕಯೋಗಿ 10. ಕನ್ನಡಾಭಿಮಾನಿ 11.ಸಮಾನತಾವಾದಿ 12.ಉದಾರತಾ