Skip to main content

Posts

Showing posts from September, 2018

ಪ್ರತ್ಯೇಕ ರಾಜ್ಯದ ಅವಶ್ಯಕತೆ ಇದೆಯೇ?

ಉತ್ತರ ಕರ್ನಾಟಕ ರಾಜ್ಯದ ಬಗ್ಗೆ ಪರ-ವಿರೋಧ ಚರ್ಚೆಗಳು ನಡೆಯುತ್ತಿರುವ ಈ ಹೊತ್ತಿನಲ್ಲಿ, ನಿಜವಾಗಲೂ ಅದರ ಅಗತ್ಯತೆ ಇದೆಯೇ? ಅಗತ್ಯವಿದ್ದರೆ ಏಕೆ? ಯಾರಿಗೆ ಅಗತ್ಯತೆಯಿದೆ? ಆ ಅಗತ್ಯತೆಗೆ ಕಾರಣಗಳೇನು? ಕಾರಣ ಯಾರು? ಎಂಬುದನ್ನು ತಿಳಿಯಬೇಕಾದುದು ತುಂಬ ಅಗತ್ಯ. ನಮಗೆಲ್ಲ ತಿಳಿದ ಹಾಗೆ ಭಾರತ ಸ್ವತಂತ್ರ ಪೂರ್ವದಲ್ಲಿ ನೂರಾರು ಚಿಕ್ಕ ಪುಟ್ಟ ಸಂಸ್ಥಾನಗಳ ಭೂಭಾಗವಾಗಿತ್ತು. ಸ್ವಾತಂತ್ರ್ಯಾನಂತರ ಭಾಷಾವಾರು ಪ್ರಾಂತ್ಯಗಳು ರಚನೆಯಾದವು. ಈ ಮೂಲಕ ಆಯಾ ಭಾಷೆಗಳನ್ನಾಡುವ ಜನರು ಒಟ್ಟಾದರು. ಬಲಿಷ್ಠ ರಾಜ್ಯಗಳನ್ನು ಕಟ್ಟಿ ಬೆಳೆಸಿದರು. ಬಲಿಷ್ಠತೆಯ ಜೊತೆಗೆ ಭಾಷಾವಾರು ಪ್ರಾಂತ್ಯಗಳಲ್ಲಿ ಪ್ರಾದೇಶಿಕ ಅಸಮಾನತೆಗಳೂ ಹೆಚ್ಚಿದವು. ಈ ಅಸಮಾನತೆಗಳು ಒಮ್ಮಿಂದೊಮ್ಮೆಲೇ ಹುಟ್ಟಿ ಹೆಚ್ಚಿದವುಗಳಲ್ಲ. ಇವುಗಳ ಹುಟ್ಟಿಗೆ ನೂರಾರು ಕಾರಣಗಳಿವೆ. ವಿಷಯವನ್ನು ಕರ್ನಾಟಕದ ಮಟ್ಟಿಗೆ ಸೀಮಿತಗೊಳಿಸಿ ನೋಡುವುದಾದರೆ. ಮೈಸೂರು, ಹೈದ್ರಾಬಾದ್, ಮುಂಬೈ, ಕರಾವಳಿ ಕರ್ನಾಟಕ ಎಂಬ ನಾಲಕ್ಕೂ ವಿಭಾಗಗಳಲ್ಲಿ ಅತೀ ಹಿಂದುಳಿದವು ಹೈದ್ರಾಬಾದ್ ಮತ್ತು ಮುಂಬೈ ಕರ್ನಾಟಕ (ಎರಡೂ ಉತ್ತರ ಕರ್ನಾಟಕದವುಗಳು).  ಹೈದ್ರಾಬಾದ್ ಕರ್ನಾಟಕ ಭಾಗದ ಇಚ್ಛಾಶಕ್ತಿಯುಳ್ಳ ರಾಜಕಾರಣಿಗಳು ಮತ್ತು ಜನರು 371 ಜೆ ಮೂಲಕ ಮೂಲಕ ತಮ್ಮ ಅಭಿವೃದ್ಧಿಗೆ ತಾವೇ ನಾಂದಿ ಹಾಡಿಕೊಂಡಿದ್ದಾರೆ. ಇತ್ತ ಮುಂಬೈ ಕರ್ನಾಟಕ, ಇಚ್ಛಾಶಕ್ತಿಯೇ ಇಲ್ಲದ ರಾಜಕಾರಣಿಗಳಿಂದ ಅನಾಥ ಶಿಶುವಾಗಿದೆ. ಮಾಹಿತಿ ತಂತ್ರಜ್ಞಾನ, ಜೈವಿಕ