Skip to main content

Posts

Showing posts from April, 2018

Five Monkeys In The Cage (Management Story)

A group of scientists placed five monkeys in a cage and in the middle, a ladder with bananas on the top. Every time a monkey went up the ladder, the scientists soaked the rest of the monkeys with cold water. After a while, every time a monkey went up the ladder, the others beat up the one on the ladder. After some time, no monkey dare to go up the ladder regardless of the temptation. Scientists then decided to substitute one of the monkeys. The first thing this new monkey did was to go up the ladder. Immediately the other monkeys beat him up. After several beatings, the new member learned not to climb the ladder even though never knew why. Then second monkey was substituted and the same occurred, the first monkey participated on the beating for the second monkey. Then third was changed and the same was repeated. Then fourth and five was replaced and beating was repeated. What was left was a group of five monkeys that even though never received a cold shower, continued

ಭಾರತೀಯ ಸಮಾಜಕಾರ್ಯ ಶಿಕ್ಷಣದ ಪ್ರಸ್ತುತ ಸಮಸ್ಯೆಗಳು

ಪೀಠಿಕೆ:  ಸಮಾಜಕಾರ್ಯ ಕೇವಲ ಒಂದು ವೃತ್ತಿ ಮಾತ್ರವಾಗಿರದೇ ಅದೊಂದು ಶೈಕ್ಷಣಿಕ ಜ್ಞಾನ ಶಾಖೆಯೂ ಆಗಿದೆ. ಸಮಾಜಕಾರ್ಯ ವೃತ್ತಿಯ ಯಶಸ್ಸು, ಸಮಾಜ ಕಾರ್ಯಕರ್ತನಾದವನು ತರಬೇತಿಯ ವೇಳೆ ಎಷ್ಟರ ಮಟ್ಟಿಗೆ ಅದನ್ನು ಸೈದ್ಧಾಂತಿಕವಾಗಿ, ಪ್ರಾಯೋಗಿಕವಾಗಿ ಅರ್ಥೈಸಿಕೊಂಡು, ಅಳವಡಿಸಿಕೊಳ್ಳುತ್ತಾನೆ ಎಂಬುದರ ಮೇಲೆ ಅವಲಂಬಿತವಾಗಿರುತ್ತದೆ. ಸಮಾಜಕಾರ್ಯ ಶಿಕ್ಷಣ ಮೂಲತಃ ಪಾಶ್ಚಾತ್ಯರ ಕೊಡುಗೆಯಾದ್ದರಿಂದ ಭಾರತದ ಸಂದರ್ಭದಲ್ಲಿ ಅದರ ಅನ್ವಯಿಸುವಿಕೆ ದೇಶೀಕರಣಗೊಂಡಿಲ್ಲ. ಸಮಾಜಕಾರ್ಯ ಶಿಕ್ಷಣ ಪರಿಚಿತವಾಗಿ ಎಂಟು ದಶಕಗಳೇ ಕಳೆದಿರುವ ಈ ಹೊತ್ತಿನಲ್ಲಿ ಅದು ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಆತ್ಮಾವಲೋಕನ ಅಗತ್ಯ  ಮತ್ತು ಅನಿವಾರ್ಯವಾಗಿದೆ. ಸಮಸ್ಯೆಗಳನ್ನು ಪರಿಹರಿಸುವ ವಿಧಾನಗಳಿಗೆ ದಾರಿ ತೊರಿಸುವ ಸಮಾಜಕಾರ್ಯ ಶಿಕ್ಷಣವೇ ಸಮಸ್ಯೆಗಳ ಸುಳಿಗೆ ಸಿಲುಕುತ್ತಿರುವುದು ಕಳವಳಕಾರಿ ಸಂಗತಿ. ಈ ನಿಟ್ಟಿನಲ್ಲಿ ‘ಸಮಾಜ ಕಾರ್ಯ ಶಿಕ್ಷಣದ ಪ್ರಸ್ತುತ ಸಮಸ್ಯೆಗಳ’ ಕುರಿತಾದ ಪ್ರಬಂಧ ಮಂಡನೆ, ಬೆಳಕು ಚೆಲ್ಲುವ ಒಂದು ಚಿಕ್ಕ ಪ್ರಯತ್ನವಾಗಿದೆ. ಭಾರತದಲ್ಲಿ ಸಮಾಜಕಾರ್ಯ ಶಿಕ್ಷಣದ ವಿಕಾಸ ಪ್ರೊ. ಸಂಜಯ ಭಟ್ಟ ಬಹಳ ಸ್ಪಷ್ಟವಾಗಿ ಭಾರತದಲ್ಲಿನ ಸಮಾಜಕಾರ್ಯ ಶಿಕ್ಷಣದ ವಿಕಾಸವನ್ನು ಈ ಕೆಳಗಿನ ಹಂತಗಳಲ್ಲಿ ವರ್ಗೀಕರಿಸಿದ್ದಾರೆ. 1.ಪ್ರಾರಂಭದ ಹಂತ(1936-46): ಈ ಹಂತ ಭಾರತದ ಪ್ರಪ್ರಥಮ ಸಮಾಜಕಾರ್ಯ ಶಾಲೆಯಾದ ‘ಸರ್ ದೊರಾಬ್ಜಿ ಟಾಟಾ ಗ್ರ್ಯಾಜುಯೇಟ್ ಸ್ಕೂಲ್ ಆಫ್ ಸೋಸಿಯ

ಮಳೆಗಾಲ, ಗೌಳಿಗರು, ವ್ಯವಸ್ಥೆ ಮತ್ತು ರಕ್ತ ಹೀರುವ ಜಿಗಳೆಗಳು!

ಕಳೆದ ಐದಾರು ವರುಷಗಳಿಂದ ಪಶ್ಚಿಮ ಘಟ್ಟಗಳಲ್ಲಿ ಮಳೆಯ ಪ್ರಮಾಣ ಗಣನೀಯವಾಗಿ ಕಡಿಮೆಯಾಗಿದೆ ಅದಾಗ್ಯೂ ಕರುನಾಡಿನ ಬೇರೆ ಭೌಗೋಳಿಕ ವಿಭಾಗಗಳಿಗೆ ಹೋಲಿಸಿ ನೋಡಿದರೆ ಪಶ್ಚಿಮಘಟ್ಟಗಳಲ್ಲಿ ಜನಜೀವನಕ್ಕೆ ಸಾಗುವಷ್ಟಾದರೂ ಮಳೆ ಆಗಿಯೇ ತೀರುತ್ತದೆ . ಅದರ ಜೊತೆ ಜೊತೆಗೆ ನಾಡಿನ ವಿವಿಧ ಭಾಗಗಳಿಗೆ ಇಲ್ಲಿ ಹುಟ್ಟುವ ನದಿಗಳೇ ಜೀವನಾಧಾರ ಎಂಬುದರಲ್ಲಿ ಎರಡು ಮಾತಿಲ್ಲ . ಈ ಕಾರಣದಿಂದ ಮಲೆನಾಡಿಗರಲ್ಲಿ ಏನಿಲ್ಲದಿದ್ದರೂ ಈ ಕಾರಣಕ್ಕಾಗಿ ಒಂದು ಹೆಮ್ಮೆಯಂತೂ ಇದ್ದೆ ಇದೆ .  ಮುಂಗಾರು ಆರಂಭದ ಸೂಚನೆ ದೊರೆತಂತೆ ಈ ಭಾಗದಲ್ಲಿ ಕೃಷಿ ಚಟುವಟಿಕೆಗಳು ಬಿಡುವಿಲ್ಲದಂತೆ ನಡೆಯತೊಡಗಿ ಊರುಗಳು ಖಾಲಿ ಹೊಡೆಯುವುದು ಸಾಮಾನ್ಯ . ಭೀಮಘಢ ರಾಷ್ಟ್ರೀಯ ಅಭಯಾರಣ್ಯದ ವ್ಯಾಪ್ತಿಯಲ್ಲಿ ಸಾಮಾನ್ಯವಾಗಿ ಭತ್ತವನ್ನೇ ಬೆಳೆಯಲಾಗುತ್ತದೆ ಅದನ್ನು ಬಿಟ್ಟರೆ ಕಬ್ಬು , ಶೆಂಗಾ ಇತ್ಯಾದಿ . ಮಳೆಗಾಲದ ದಿನಗಳೆಂದರೆ ರೈತರಿಗಷ್ಟೆ ಅಲ್ಲ ನಮಗೂ ಹಬ್ಬವಾಗಿತ್ತು . ಉಳಿದ ದಿನಗಳಿಗೆ ಹೋಲಿಸಿದರೆ ಮಳೆಗಾಲದ ದಿನಗಳಲ್ಲಿ ಶಾಲೆಯ ನಿಯಮಗಳಲ್ಲಿ ನಮ್ಯತೆ ಇರುತ್ತಿತ್ತು .   ಪಾಠ ಪ್ರವಚನಗಳಿಗಿಂತ ಹೆಚ್ಚಾಗಿ ಮೇಷ್ಟ್ರು   ಪಂಚತಂತ್ರದ ಕಥೆಗಳನ್ನೇ ಹೇಳುತ್ತಿದ್ದರು . ನಮ್ಮ ಶಾಲೆಯ ವಿಶಾಲ ಮತ್ತು ಸಮತಟ್ಟು ಮೈದಾನ ಮಳೆಯ ಹೊಡೆತಕ್ಕೆ ಸಿಕ್ಕು ಪಾಚಿಗಟ್ಟುತ್ತಿತ್ತು . ಓಡಾಡುವಾಗಷ್