Skip to main content

ಪ್ರತ್ಯೇಕ ರಾಜ್ಯದ ಅವಶ್ಯಕತೆ ಇದೆಯೇ?

ಉತ್ತರ ಕರ್ನಾಟಕ ರಾಜ್ಯದ ಬಗ್ಗೆ ಪರ-ವಿರೋಧ ಚರ್ಚೆಗಳು ನಡೆಯುತ್ತಿರುವ ಈ ಹೊತ್ತಿನಲ್ಲಿ, ನಿಜವಾಗಲೂ ಅದರ ಅಗತ್ಯತೆ ಇದೆಯೇ? ಅಗತ್ಯವಿದ್ದರೆ ಏಕೆ? ಯಾರಿಗೆ ಅಗತ್ಯತೆಯಿದೆ? ಆ ಅಗತ್ಯತೆಗೆ ಕಾರಣಗಳೇನು? ಕಾರಣ ಯಾರು? ಎಂಬುದನ್ನು ತಿಳಿಯಬೇಕಾದುದು ತುಂಬ ಅಗತ್ಯ.

ನಮಗೆಲ್ಲ ತಿಳಿದ ಹಾಗೆ ಭಾರತ ಸ್ವತಂತ್ರ ಪೂರ್ವದಲ್ಲಿ ನೂರಾರು ಚಿಕ್ಕ ಪುಟ್ಟ ಸಂಸ್ಥಾನಗಳ ಭೂಭಾಗವಾಗಿತ್ತು. ಸ್ವಾತಂತ್ರ್ಯಾನಂತರ ಭಾಷಾವಾರು ಪ್ರಾಂತ್ಯಗಳು ರಚನೆಯಾದವು. ಈ ಮೂಲಕ ಆಯಾ ಭಾಷೆಗಳನ್ನಾಡುವ ಜನರು ಒಟ್ಟಾದರು. ಬಲಿಷ್ಠ ರಾಜ್ಯಗಳನ್ನು ಕಟ್ಟಿ ಬೆಳೆಸಿದರು. ಬಲಿಷ್ಠತೆಯ ಜೊತೆಗೆ ಭಾಷಾವಾರು ಪ್ರಾಂತ್ಯಗಳಲ್ಲಿ ಪ್ರಾದೇಶಿಕ ಅಸಮಾನತೆಗಳೂ ಹೆಚ್ಚಿದವು. ಈ ಅಸಮಾನತೆಗಳು ಒಮ್ಮಿಂದೊಮ್ಮೆಲೇ ಹುಟ್ಟಿ ಹೆಚ್ಚಿದವುಗಳಲ್ಲ. ಇವುಗಳ ಹುಟ್ಟಿಗೆ ನೂರಾರು ಕಾರಣಗಳಿವೆ.

ವಿಷಯವನ್ನು ಕರ್ನಾಟಕದ ಮಟ್ಟಿಗೆ ಸೀಮಿತಗೊಳಿಸಿ ನೋಡುವುದಾದರೆ. ಮೈಸೂರು, ಹೈದ್ರಾಬಾದ್, ಮುಂಬೈ, ಕರಾವಳಿ ಕರ್ನಾಟಕ ಎಂಬ ನಾಲಕ್ಕೂ ವಿಭಾಗಗಳಲ್ಲಿ ಅತೀ ಹಿಂದುಳಿದವು ಹೈದ್ರಾಬಾದ್ ಮತ್ತು ಮುಂಬೈ ಕರ್ನಾಟಕ (ಎರಡೂ ಉತ್ತರ ಕರ್ನಾಟಕದವುಗಳು).  ಹೈದ್ರಾಬಾದ್ ಕರ್ನಾಟಕ ಭಾಗದ ಇಚ್ಛಾಶಕ್ತಿಯುಳ್ಳ ರಾಜಕಾರಣಿಗಳು ಮತ್ತು ಜನರು 371 ಜೆ ಮೂಲಕ ಮೂಲಕ ತಮ್ಮ ಅಭಿವೃದ್ಧಿಗೆ ತಾವೇ ನಾಂದಿ ಹಾಡಿಕೊಂಡಿದ್ದಾರೆ. ಇತ್ತ ಮುಂಬೈ ಕರ್ನಾಟಕ, ಇಚ್ಛಾಶಕ್ತಿಯೇ ಇಲ್ಲದ ರಾಜಕಾರಣಿಗಳಿಂದ ಅನಾಥ ಶಿಶುವಾಗಿದೆ.

ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ, ಉತ್ಪಾದನಾ ಉದ್ಯಮಗಳೆಲ್ಲವುಗಳು ಬೆಂಗಳೂರನ್ನೊಳಗೊಂಡ ಮೈಸೂರು ವಿಭಾಗದಲ್ಲಿ ಕೇಂದ್ರೀಕೃತವಾಗಿವೆ. ಬಹುಶಃ ರಾಜ್ಯದ ಬೊಕ್ಕಸಕ್ಕೆ ಶೇಕಡಾ 40ಕ್ಕಿಂತ ಹೆಚ್ಚು ಆದಾಯ ಈ ಭಾಗದಿಂದಲೇ ಬರುತ್ತಿರಲೂಬಹುದು. ಮೈಸೂರು ಸ್ವಾತಂತ್ರ್ಯ ಮತ್ತು ಕರ್ನಾಟಕ ಏಕೀಕರಣ ಪೂರ್ವದಲ್ಲಿಯೇ ಭಾರತದ ಮಾದರಿ ರಾಜ್ಯವಾಗಿ ರೂಪುಗೊಂಡಿತ್ತು. ಈ ಭಾಗದ ಅಭಿವೃದ್ಧಿ ಒಮ್ಮಿಂದೊಮ್ಮೆಲೇ ಆದದ್ದಲ್ಲ.

ಉತ್ತರ ಕರ್ನಾಟಕ ಸಮಸ್ಯೆಗಳ ಆಗರ. ನೀರು, ರಸ್ತೆ, ಶಿಕ್ಷಣ, ಆರೋಗ್ಯಗಳಂತಹ ಮೂಲಭೂತ ಸೌಕರ್ಯಗಳಿಗಾಗಿಯೇ ಪರದಾಟ-ಹೋರಾಟಗಳಿವೆ. ಆದರೆ ಇವೆಲ್ಲವುಗಳಿಗೆ "ಪ್ರತ್ಯೇಕ ರಾಜ್ಯ"ವೇ ಪರಿಹಾರವಲ್ಲ. ಆದರೆ "ಪ್ರತ್ಯೇಕ ರಾಜ್ಯ"ದ ಕೂಗಿನ ಹಿಂದೆ ಈ ಭಾಗದ ಜನರ ಅಸ್ಮಿತೆ, ಹತಾಶೆ, ನೋವು, ಕಾಳಜಿಗಳಿವೆ. ಹೆಸರಿಗಷ್ಟೇ ಬೆಳಗಾವಿಯನ್ನು ಎರಡನೇ ರಾಜಧಾನಿಯನ್ನಾಗಿ ಘೋಷಿಸಿ, ಖಾಲಿ ಹೊಡೆಯುವ ಸುವರ್ಣ ಸೌಧವನ್ನು ಕಟ್ಟಿ ವರ್ಷಕ್ಕೊಂದು ಬಾರಿ for the change ಚಳಿಗಾಲದ ಅಧಿವೇಶನ ನಡೆಸಿದರೆ ಈ ಭಾಗದ ಅಭಿವೃದ್ಧಿಯಾದಂತಲ್ಲ.

ಯಾಕೆ ಸ್ವಾಮಿ ಬೆಳಗಾವಿಗೆ ಐಟಿ-ಬಿಟಿ-ಉತ್ಪಾದನ ವಲಯ ಸಲಹುವ ತಾಕತ್ತಿಲ್ಲವೇ? ಇಲ್ಲಿ ಈ ಕಡೆ ನಿಪುಣ ಮಾನವ ಸಂಪತ್ತಿಲ್ಲವೇ? ಉತ್ತರ ಕರ್ನಾಟಕದಲ್ಲಿ ಉತ್ತಮ ಮಾನವ ಸಂಪನ್ಮೂಲವಿದೆ ಆದರೆ ಪ್ರಬಲ ರಾಜಕೀಯ ಶಕ್ತಿಯ ಕೊರತೆಯಿದೆ. ಈ ಕೊರತೆಯೇ ಸರಕಾರದ ಮಟ್ಟದಲ್ಲಿ ಲಾಬಿ ನಡೆಸಲು ಅಡ್ಡಿಯಾಗಿದೆ. ಈ ಭಾಗದ ಅನಕ್ಷರತೆ, ನಾಮ್  ಕಾ ವಾಸ್ತೇ ಸಾಕ್ಷರತೆ, ಪ್ರಶ್ನಿಸುವ ಮನೋಭಾವವಿಲ್ಲದಿರುವಿಕೆ, ತುಂಬಿ ತುಳಕುತ್ತಿರುವ ಭ್ರಷ್ಟಾಚಾರ, ವಂಶಾಡಳಿತ, ನಿರಂಕುಶ ಆಡಳಿತದ ಗಣರಾಜ್ಯಗಳು, ಗಡಿ ವಿವಾದಗಳು, ನದಿ ಹೋರಾಟಗಳು, ಆಳುವವರ ಸ್ವಾರ್ಥ ಥೂತ್ತೇರಿ!

ಇನ್ನು ಉತ್ತರ ಕರ್ನಾಟಕ ಭಾಗದ ಹಿಂದುಳಿದಿರುವಿಕೆಗೆ ರಾಜಕೀಯ ಶಿಖಂಡಿತನವೂ ಕಾರಣ. ಉದಾಹರಣೆಗೆ ಸಂವಿಧಾನ ವಿರೋಧಿ ಹೇಳಿಕೆಗಳನ್ನು ನೀಡುತ್ತ ಸದಾ ವಿವಾದವನ್ನೇ ಹಾಸಿ, ಹೊದ್ದುಕೊಳ್ಳಬಯಸುವ ಉತ್ತರ ಕರ್ನಾಟಕದ ಹೇತ್ಲಾಂಡಿಯೊಬ್ಬ, ಐದಾರು ಬಾರಿ ಆರಿಸಿ ಬಂದರೂ ಕಿಸಿದಿದ್ದೇನು? ಎಂಬುದೇ ಯಕ್ಷ ಪ್ರಶ್ನೆ! ಅವನ ಕ್ಷೇತ್ರದಲ್ಲಿ ಬರುವ ಗುಡ್ಡಗಾಡಿನ ತಾಲೂಕಿನ ಜನರಿಗೆ ಈ ಹೇತ್ಲಾಂಡಿಯ ಹೆಸರೇ ಗೊತ್ತಿಲ್ಲ. ಈ ಭಾಗಕ್ಕೆ ಈತನ ಕೊಡುಗೆ ಸೊನ್ನೆ!

ಇದು, ಉತ್ತರ ಕರ್ನಾಟಕವನ್ನು ನಿರ್ಲಕ್ಷ್ಯದಿಂದ ಕಾಣುವ ದಕ್ಷಿಣದವರಿಗೆ, ತಮ್ಮದೇ ಪ್ರದೇಶವನ್ನು ಪ್ರೀತಿಸುವ-ಅಭಿವೃದ್ಧಿ ಪಡಿಸುವ ಇಚ್ಛಾಶಕ್ತಿಯೇ ಇಲ್ಲದ ನಾಯಕರಿಗೆ, ರಾಜಕೀಯ ಬೇಳೆ ಬೇಯಿಸಿಕೊಳ್ಳುವ ಹಿಡೆನ್ ಅಜೆಂಡಾ ಇಟ್ಕೊಂಡು ಪ್ರತ್ಯೇಕ ರಾಜ್ಯ ಕೇಳುತ್ತಿರುವ ನರಿ ಬುದ್ಧಿಯವರಿಗೆ, ಪ್ರಶ್ನಿಸುವ ಮನೋಭಾವವಿಲ್ಲದೇ ಬದುಕುತ್ತಿರುವ ಸತ್ತ ಪ್ರಜೆಗಳಿಗೆ ಆತ್ಮಾವಲೋಕನದ ಸಮಯ!

ಅಂದ ಹಾಗೆ ಕೆಲವರ ಕನಸಿನ, ಪ್ರತ್ಯೇಕ ರಾಜ್ಯದ, ಮುಖ್ಯಮಂತ್ರಿ ಅಭ್ಯರ್ಥಿ ಯಾರು?

#Karnatakavonde

Comments

Popular posts from this blog

ಭಾರತೀಯ ಸಮಾಜಕಾರ್ಯ ಶಿಕ್ಷಣದ ಪ್ರಸ್ತುತ ಸಮಸ್ಯೆಗಳು

ಪೀಠಿಕೆ:  ಸಮಾಜಕಾರ್ಯ ಕೇವಲ ಒಂದು ವೃತ್ತಿ ಮಾತ್ರವಾಗಿರದೇ ಅದೊಂದು ಶೈಕ್ಷಣಿಕ ಜ್ಞಾನ ಶಾಖೆಯೂ ಆಗಿದೆ. ಸಮಾಜಕಾರ್ಯ ವೃತ್ತಿಯ ಯಶಸ್ಸು, ಸಮಾಜ ಕಾರ್ಯಕರ್ತನಾದವನು ತರಬೇತಿಯ ವೇಳೆ ಎಷ್ಟರ ಮಟ್ಟಿಗೆ ಅದನ್ನು ಸೈದ್ಧಾಂತಿಕವಾಗಿ, ಪ್ರಾಯೋಗಿಕವಾಗಿ ಅರ್ಥೈಸಿಕೊಂಡು, ಅಳವಡಿಸಿಕೊಳ್ಳುತ್ತಾನೆ ಎಂಬುದರ ಮೇಲೆ ಅವಲಂಬಿತವಾಗಿರುತ್ತದೆ. ಸಮಾಜಕಾರ್ಯ ಶಿಕ್ಷಣ ಮೂಲತಃ ಪಾಶ್ಚಾತ್ಯರ ಕೊಡುಗೆಯಾದ್ದರಿಂದ ಭಾರತದ ಸಂದರ್ಭದಲ್ಲಿ ಅದರ ಅನ್ವಯಿಸುವಿಕೆ ದೇಶೀಕರಣಗೊಂಡಿಲ್ಲ. ಸಮಾಜಕಾರ್ಯ ಶಿಕ್ಷಣ ಪರಿಚಿತವಾಗಿ ಎಂಟು ದಶಕಗಳೇ ಕಳೆದಿರುವ ಈ ಹೊತ್ತಿನಲ್ಲಿ ಅದು ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಆತ್ಮಾವಲೋಕನ ಅಗತ್ಯ  ಮತ್ತು ಅನಿವಾರ್ಯವಾಗಿದೆ. ಸಮಸ್ಯೆಗಳನ್ನು ಪರಿಹರಿಸುವ ವಿಧಾನಗಳಿಗೆ ದಾರಿ ತೊರಿಸುವ ಸಮಾಜಕಾರ್ಯ ಶಿಕ್ಷಣವೇ ಸಮಸ್ಯೆಗಳ ಸುಳಿಗೆ ಸಿಲುಕುತ್ತಿರುವುದು ಕಳವಳಕಾರಿ ಸಂಗತಿ. ಈ ನಿಟ್ಟಿನಲ್ಲಿ ‘ಸಮಾಜ ಕಾರ್ಯ ಶಿಕ್ಷಣದ ಪ್ರಸ್ತುತ ಸಮಸ್ಯೆಗಳ’ ಕುರಿತಾದ ಪ್ರಬಂಧ ಮಂಡನೆ, ಬೆಳಕು ಚೆಲ್ಲುವ ಒಂದು ಚಿಕ್ಕ ಪ್ರಯತ್ನವಾಗಿದೆ. ಭಾರತದಲ್ಲಿ ಸಮಾಜಕಾರ್ಯ ಶಿಕ್ಷಣದ ವಿಕಾಸ ಪ್ರೊ. ಸಂಜಯ ಭಟ್ಟ ಬಹಳ ಸ್ಪಷ್ಟವಾಗಿ ಭಾರತದಲ್ಲಿನ ಸಮಾಜಕಾರ್ಯ ಶಿಕ್ಷಣದ ವಿಕಾಸವನ್ನು ಈ ಕೆಳಗಿನ ಹಂತಗಳಲ್ಲಿ ವರ್ಗೀಕರಿಸಿದ್ದಾರೆ. 1.ಪ್ರಾರಂಭದ ಹಂತ(1936-46): ಈ ಹಂತ ಭಾರತದ ಪ್ರಪ್ರಥಮ ಸಮಾಜಕಾರ್ಯ ಶಾಲೆಯಾದ ‘ಸರ್ ದೊರಾಬ್ಜಿ ಟಾಟಾ ಗ್ರ್ಯಾಜುಯೇಟ್ ಸ್ಕೂಲ್ ಆಫ್ ಸೋಸಿಯ

ಚತುರ್ದ್ವಂಸಕ ನಾಶ ಅಭಿಯಾನ-ಚೀನಾದ ಸ್ವಯಂಕೃತ ವಿಪತ್ತು!

ಈ ಅಭಿಯಾನ ಚೀನಾದ "ಮುನ್ನಡೆಯ ಮಹಾಜಿಗಿತ" (Great Leap Forward 1958-1962 ) ನೀತಿಯ ಮೊಟ್ಟ ಮೊದಲ ಕ್ರಮವಾಗಿತ್ತು. ಇದರಡಿಯಲ್ಲಿ ಗುರುತಿಸಿದ ಆ ನಾಲ್ಕು ದ್ವಂಸಕಗಳೆಂದರೆ- ಇಲಿ, ನೊಣ, ಸೊಳ್ಳೆ ಮತ್ತು ಗುಬ್ಬಚ್ಚಿ. ಗುಬ್ಬಚ್ಚಿಗಳನ್ನು ನಾಶಪಡಿಸುವ ಅಭಿಯಾನ"ಗುಬ್ಬಚ್ಚಿಗಳ ಹತ್ಯೆಯ ಅಭಿಯಾನ" ಎಂದೇ ಪ್ರಸಿದ್ಧಿಯಾಗಿತ್ತು. ಇದು ತೀವ್ರ ತೆರನಾದ ಪರಿಸರ ಅಸಮತೋಲನಕ್ಕೆ ಕಾರಣವಾಯಿತು. ಚೀನಾದ ಭೀಕರ ಕ್ಷಾಮಕ್ಕೆ ಕಾರಣವಾಯಿತು. ಇದನ್ನರಿತ ಮಾವೋ ತ್ಸೆ ತುಂಗ್ 1960 ರಲ್ಲಿ ಈ ಅಭಿಯಾನದ ಪಟ್ಟಿಯಿಂದ ಗುಬ್ಬಿಯನ್ನು ಕೈಬಿಟ್ಟು ತಿಗಣೆಯನ್ನು ಸೇರಿಸಿದ. "ಚತುರ್ದ್ವಂಸಕ ನಾಶ ಅಭಿಯಾನ"ವನ್ನು ಮಾವೋ ತ್ಸೆ ತುಂಗ್ 1960 ರಲ್ಲಿ  ಮುನ್ನಡೆಯ ಮಹಾಜಿಗಿತ ಎಂಬ ಆರ್ಥಿಕ ನೀತಿಯ ಭಾಗವಾಗಿ ಪರಿಚಯಿಸಿದ.ಇದರ ಮೂಲ ಉದ್ದೇಶ  ರೋಗ ರುಜಿನಗಳನ್ನು ಹರಡುವ ದ್ವಂಸಕಗಳಾದ ಈ ಕೆಳಗಿನ ಜೀವಿಗಳ ನಿರ್ಮೂಲನೆಯಾಗಿತ್ತು. 1. ಸೊಳ್ಳೆ -ಮಲೇರಿಯಾ ವಾಹಕ 2. ಇಲಿ-ಪ್ಲೇಗ್ ವಾಹಕ 3. ವ್ಯಾಪಕ ನೊಣಗಳು 4. ಗುಬ್ಬಚ್ಚಿಗಳು- ಆಹಾರಧಾನ್ಯ ಮತ್ತು ಹಣ್ಣುಗಳ ದ್ವಂಸಕ. ಗುಬ್ಬಚ್ಚಿಗಳು,ರೈತರನ್ನು ಶೋಷಿಸುವ ಬಂಡವಾಳಶಾಹಿತ್ವದ ಜೀವಿಗಳೆಂದು ಚೀನಾ ಸರ್ಕಾರ ಘೋಷಿಸಿತು. ಈ ಅಭಿಯಾನದ ಪರಿಣಾಮವಾಗಿ ಲಕ್ಷಾಂತರ ಗುಬ್ಬಚ್ಚಿಗಳು ಸತ್ತವು. ಅವುಗಳಿಗೆ ಮರದ ಮೇಲೆ ಅಷ್ಟೆ ಅಲ್ಲ ಆಕಾಶದಲ್ಲಿ ಹಾರಾಡಲು ಅವಕಾಶವಿರಲಿಲ್ಲ. ಗುಬ್ಬಚ್ಚಿ ಗೂಡುಗಳನ್ನು,