Skip to main content

ನಗುವುದೋ, ಅಳುವುದೋ ನೀವೇ ಹೇಳಿ!

 ಇಡೀ ಜಗತ್ತೇ ವಿಜ್ಞಾನ, ತಂತ್ರಜ್ಞಾನ, ವೈಚಾರಿಕತೆ, ವೈಜ್ಞಾನಿಕತೆಯೆಡೆಗೆ ಬಹಳ ತೀವ್ರಗತಿಯಲ್ಲಿ ತೆರೆದುಕೊಳ್ಳುತ್ತಿದೆ. ಪ್ರತಿ ಮಿಲಿ ಸೆಕೆಂಡುಗಳಿಗೂ ತಳಮಟ್ಟದ ಮಾನವ ಜೀವನವನ್ನು ಸುಗಮಗೊಳಿಸಬಲ್ಲ ಸಂಶೋಧನೆಗಳಾಗುತ್ತಿವೆ. ಬದಲಾವಣೆ ಜಗದ ನಿಯಮ, ಜೀವಂತಿಕೆಯ ಲಕ್ಷಣ. ಬದಲಾವಣೆಗೆ ಸ್ಪಂದಿಸದಿರುವಿಕೆ ಜೀವಂತಿಕೆಯ ಲಕ್ಷಣವೇ ಅಲ್ಲ. ಬದಲಾಗದ ಸಮಾಜ ಅವನತಿಯತ್ತ ಸಾಗುತ್ತಿರುವ ಅಥವಾ ಕಾಲಚಕ್ರದಲ್ಲಿ ಹಿಮ್ಮುಖವಾಗಿ ಚಲಿಸುತ್ತಿರುವ ಸಂಕೇತ. ಮಾನವ ಜೀವಿಯ ಪ್ರತಿ ತಲೆಮಾರು ಸಾಧ್ಯವಾದಷ್ಟು ನಾಗರಿಕತೆ ಅಥವಾ ಮಾನವೀಯತೆಯನ್ನು ಗಳಿಸುತ್ತ ಈಗಿರುವ ಮಟ್ಟಕ್ಕೆ ಬಂದು ತಲುಪಿದೆ.ಅಂದರೆ ಮುಮ್ಮುಖ ಚಲನೆ ಎಂಬುದು ಸಾಧ್ಯವಾದಷ್ಟು ಜೀವಪರ.

ಬಹಳ ವಿಷಾಧದ ಸಂಗತಿಯೇನೆಂದರೆ ಹಿಮ್ಮುಖವಾಗಿ ಅಥವಾ ಅನಾಗರೀಕತೆಯೆಡೆಗೆ ತಲುಪಲು ಹವಣಿಸುತ್ತಿರುವ ಜಗತ್ತು ಕೂಡ ಇದೆ. ಈ ಹವಣಿಕೆಗೆ ವೇಗವರ್ಧಕವಾಗಿ ವಿಕೃತ, ವಿಕ್ಷಿಪ್ತ ರಾಜಕೀಯ ವ್ಯವಸ್ಥೆಯೂ ಇರುತ್ತದೆ. ಈ ವಿಕ್ಷಿಪ್ತ ಮತ್ತು ವಿಕೃತ ರಾಜಕೀಯ ವ್ಯವಸ್ಥೆ ಸಮಾಜವನ್ನು ತಾನಿರುವ ಮಟ್ಟದಿಂದ ಒಂದು ಹೆಜ್ಜೆ ಮುಂದೆ ಹೋಗಿ ಯೋಚಿಸುವುದನ್ನು ಯಾವ ಕಾರಣಕ್ಕೂ ಸಹಿಸುವುದಿಲ್ಲ. ಬದಲಾಗಿ ಮತ್ತೆ ಹಿಮ್ಮುಖವಾಗಿ ತಳ್ಳುತ್ತದೆ. ಸಮಾಜದ ಮುಮ್ಮುಖ ಚಲನೆ ತನ್ನ ಹಿಡೆನ್ ಅಜೆಂಡಾಗಳಿಗೆ ಎಲ್ಲಿ ಮುಳುವಾಗಿಬಿಡುತ್ತದೋ ಎಂಬ ಭಯವೇ ಇದಕ್ಕೆ ಕಾರಣ.

ಚರಿತ್ರೆಯ ಚಿತಾಭಸ್ಮವನ್ನು ಕೆದಕಿ ರಾಮ,ರಾವಣ, ಬಾಬರ, ಟಿಪ್ಪು,  ನೆಹರು, ಗಾಂಧಿ, ಜಿನ್ನಾ,  ಸುಭಾಶ್, ಪಟೇಲ್, ಇಂದಿರ ಇತ್ಯಾದಿ ಎಲ್ಲರನ್ನೂ ಈ ಹೊತ್ತಿಗೆ ತಂದು ಕಿಡಿ ಹೊತ್ತಿಸಿ ಚಳಿ ಕಾಯಿಸಿಕೊಳ್ಳುವುದನ್ನು ಭಾರತದ ವಿಕೃತ ರಾಜಕೀಯ ವ್ಯವಸ್ಥೆಗೆ ಹೇಳಿಕೊಡಬೇಕಾದ ಅಗತ್ಯತೆ ಇಲ್ಲ.

ಉದಾಹರಣೆಗೆ ಎಂದೋ ತನ್ನ ರಾಜ್ಯವನ್ನು ಉಳಿಸಿಕೊಳ್ಳಲು ತನ್ನಿಬ್ಬರ ಮಕ್ಕಳನ್ನು ಒತ್ತೆ ಇಟ್ಟು ಕೊನೆಯ ಉಸಿರಿನವರೆಗೂ ಹೋರಾಡಿದ ಟಿಪ್ಪುವನ್ನು ಚರಿತ್ರೆಯ ಒಂದು ಭಾಗವಾಗಿ ನೋಡದೇ ಈ ಹೊತ್ತಿಗೆ  ಜಯಂತಿಯ ಹೆಸರಿನಲ್ಲಿ ಎಳೆತಂದು ಮುಸ್ಲಿಂರ ವೋಟಿಗಾಗಿ ಕಾಂಗ್ರೆಸ್ ಓಲೈಸುತ್ತಿದ್ದರೆ, ಹಿಂದೂಗಳ ವೋಟಿಗಾಗಿ ಬಿಜೆಪಿ ವಿರೋಧಿಸುತ್ತಿದೆ.

ಈ ಪಕ್ಷಗಳಿಂದ ಜನಸಾಮಾನ್ಯನ ಬದುಕು ಹಸನಾಗಿಲ್ಲ. ಜನಸಾಮಾನ್ಯರ ಬದುಕನ್ನು ಹಸನಾಗಿಸಬಲ್ಲ ಕೆಲಸಗಳನ್ನು ಬಿಟ್ಟು ಉಳಿದೆಲ್ಲವುಗಳನ್ನು ಅಧಿಕಾರದಲ್ಲಿರುವ ಪಕ್ಷಗಳು ಮಾಡುತ್ತಿವೆ. ಈಗಲೂ ಹೈವೇ ಬದಿಗೆ ಕೊಳಚೆಯಲ್ಲಿ ಟೆಂಟೊಂದನ್ನು ಹಾಕಿ ಜೀವನ ಸಾಗಿಸುವ, ಟ್ರಾಪಿಕ್ಕಲ್ಲಿ ತಟ್ಟೆ ಹಿಡಿದುಕೊಂಡು ಭಿಕ್ಷೆ ಬೇಡುವ, ಮ್ಯಾನ್ ಹೋಲ್ಗೇ ಇಳಿದು ಸ್ವಚ್ಛಗೊಳಿಸುವಾಗ ಸಾಯುವ, ಸಾಲ ಮಾಡಿ ಬೆಳೆ ಬರದೇ, ಬಂದೂ ಸರಿಯಾದ ಬೆಲೆ ಬರದೇ ಸಾಯುವ, ಚಪ್ಪಾಳೆ ತಟ್ಟಿ ಕಾಸು ಬೇಡುವ, ಉದ್ಯೋಗಕ್ಕಾಗಿ ಅಲೆದಾಡಿ ಚಪ್ಪಲಿ ಸವೆಸಿಕೊಳ್ಳುವ, ಮೂರೊತ್ತಿನ ಊಟಕ್ಕೆ ಗತಿಯಿಲ್ಲದೇ ಮೈ ಮಾರಿಕೊಂಡು ಜೀವನ ಸಾಗಿಸುವ ಹೀಗೆ ಏನೇನೋ ಕಷ್ಟಗಳ ಸುಳಿಯಲ್ಲಿ ಸಿಲುಕಿಕೊಂಡಿರುವ ದೊಡ್ಡ ಸಂಖ್ಯೆಯ ಜನ ಭಾರತದಲ್ಲಿ ಈಗಲೂ ಇದೆ.

ಭಾರತದ ರಾಜಕೀಯ ವ್ಯವಸ್ಥೆಗೆ ಎಂದಿಗೂ ಆರೋಗ್ಯ, ಶಿಕ್ಷಣ,ಜಲ,ಪರಿಸರ, ವಿಜ್ಞಾನ-ತಂತ್ರಜ್ಞಾನ, ಕೃಷಿ, ಮೂಲಭೂತ ಸೌಕರ್ಯ, ಉದ್ಯೋಗ, ಪ್ರವಾಸೋದ್ಯಮ, ಕಸ - ಮಾಲಿನ್ಯ ನಿರ್ವಹಣೆ ಇತ್ಯಾದಿ ಇವೆಲ್ಲ ಪ್ರಚಾರದ ಪ್ರಣಾಳಿಕೆಯ ಮುಖ್ಯ ವಿಷಯಗಳೇ ಅಲ್ಲ. ಇಲ್ಲೇನಿದ್ದರೂ ರಾಮ, ರಾವಣ, ಬಾಬರ, ಟಿಪ್ಪು, ಗಾಂಧಿ, ಜಿನ್ನಾ, ನೆಹರು, ಪಟೇಲ್,  ಹಿಂದುತ್ವ, ಮಂದಿರ, ತಲಾಖ್, ಗೋರಕ್ಷಾ, ಗೋಮೂತ್ರ, ಸೆಗಣಿ, ಪಕೋಡಾ, ಮೋರಿ ಗ್ಯಾಸ್, 60 ವರ್ಷ, ಇಸ್ವಗುರು, ಮಂಕೀ ಬಾತ್, ಶಬರಿಮಲೆ, ಸಂವಿಧಾನ, ಪ್ಲೈಟ್ ಮೋಡ್, ಪಪ್ಪು, ಇಟಲಿ ರಾಣಿ, 18 ತಾಸು ಕೆಲಸ... ಇನ್ನೂ ಏನೇನೋ ಭಾರತ್ ಮಾತಾಕೀ ಜೈ, ವಂದೇ ಮಾತರಂ!

ಇವ್ಯಾವ ರಾಜಕೀಯ ವಿಕೃತಿಗಳು ಜನಸಾಮಾನ್ಯನ ಬದುಕನ್ನು ಹಸನಾಗಿಸುವುದಿಲ್ಲ. ಅವನ ಬೆಂಬಲಕ್ಕೆ ಬರೋದು ಅವನು ನಂಬಿರುವ ಕಾಯಕ ಮಾತ್ರ. ನೂರಕ್ಕೆ ತೊಂಬತ್ತೊಂಬತ್ತರಷ್ಟು ಜನ ಮೋದಿಗೆ ಜೈ ಎನ್ನುತ್ತಾರೆಂಬ ಕಾರಣಕ್ಕೆ ಕುರಿಗಳು ಗುಂಪಿನಲ್ಲಿ ಬ್ಯಾ ಎನ್ನುವ ಹಾಗೆ ಗುಂಪಿನಲ್ಲಿ ಜೈ ಎನ್ನುವುದು, ಗಾಂಧಿ ಎಂಬ ಹೆಸರಿದೆ ಎಂಬ ಕಾರಣಕ್ಕೆ ರಾಹುಲ್ನನ್ನು ಬೆಂಬಲಿಸುವುದು,ಯಾವನೋ ಒಬ್ಬ ರಾಜಕೀಯ ತಿರುಬೋಕಿ ಜೆಡ್ ಸೆಕ್ಯುರಿಟಿಯಲ್ಲಿ ನಿಂತು ಮಾಡಿದ ಪ್ರಚೋದನಕಾರಿ ಭಾಷಣವನ್ನು ಗಂಭೀರವಾಗಿ ಪರಿಗಣಿಸಿ ಬಲಿಪಶುವಾಗುವುದು, ರಾಜಕೀಯ ಪಕ್ಷಗಳ ಬೂಟು ನೆಕ್ಕೋ ಸಂಘ ಸಂಸ್ಥೆಗಳಲ್ಲಿ ಸೇರಿ ಕ್ಷಣಿಕ ಜೀವನದ ಅಮೂಲ್ಯ ಕ್ಷಣಗಳನ್ನೂ ಕಳೆದುಕೊಳ್ಳುವುದು ನಮ್ಮ ಭವಿಷ್ಯದ ಗೋರಿಯನ್ನು ನಾವೇ ತೋಡಿಕೊಂಡ ಹಾಗೆ!

ಟಿಪ್ಪು ತನಗೆಂದೂ ಒಂದು ಜಯಂತಿ ಬೇಕೆಂದು, ರಾಮ ತನಗೆಂದೂ ಒಂದು ಮಂದಿರ ಬೇಕೆಂದು, ಸರ್ದಾರ್ ಪಟೇಲ್ ತಮಗೆಂದೂ ಒಂದು  ಮೂರು ಸಾವಿರ ಕೋಟಿ ರೂಪಾಯಿಯ  ಎತ್ತರದ ಪ್ರತಿಮೆ ಬೇಕೆಂದು, ಬಸವಣ್ಣ ತನಗೆಂದೂ ಲಂಡನ್ನಲ್ಲೊಂದು ಪ್ರತಿಮೆ ಬೇಕೆಂದು ಕೇಳಿಲ್ಲ ಕೇಳುವಷ್ಟು ಸಂಕುಚಿತರು ಅವರಲ್ಲ. ನಿಜವಾದ ಸಂಕುಚಿತರು ಮತ್ತು ನೀಚರೆಂದರೇ ಅವರ ಹೆಸರಿನ ಮೇಲೆ ರಾಜಕೀಯ ಮಾಡುವವರು.

Comments

Popular posts from this blog

ಭಾರತೀಯ ಸಮಾಜಕಾರ್ಯ ಶಿಕ್ಷಣದ ಪ್ರಸ್ತುತ ಸಮಸ್ಯೆಗಳು

ಪೀಠಿಕೆ:  ಸಮಾಜಕಾರ್ಯ ಕೇವಲ ಒಂದು ವೃತ್ತಿ ಮಾತ್ರವಾಗಿರದೇ ಅದೊಂದು ಶೈಕ್ಷಣಿಕ ಜ್ಞಾನ ಶಾಖೆಯೂ ಆಗಿದೆ. ಸಮಾಜಕಾರ್ಯ ವೃತ್ತಿಯ ಯಶಸ್ಸು, ಸಮಾಜ ಕಾರ್ಯಕರ್ತನಾದವನು ತರಬೇತಿಯ ವೇಳೆ ಎಷ್ಟರ ಮಟ್ಟಿಗೆ ಅದನ್ನು ಸೈದ್ಧಾಂತಿಕವಾಗಿ, ಪ್ರಾಯೋಗಿಕವಾಗಿ ಅರ್ಥೈಸಿಕೊಂಡು, ಅಳವಡಿಸಿಕೊಳ್ಳುತ್ತಾನೆ ಎಂಬುದರ ಮೇಲೆ ಅವಲಂಬಿತವಾಗಿರುತ್ತದೆ. ಸಮಾಜಕಾರ್ಯ ಶಿಕ್ಷಣ ಮೂಲತಃ ಪಾಶ್ಚಾತ್ಯರ ಕೊಡುಗೆಯಾದ್ದರಿಂದ ಭಾರತದ ಸಂದರ್ಭದಲ್ಲಿ ಅದರ ಅನ್ವಯಿಸುವಿಕೆ ದೇಶೀಕರಣಗೊಂಡಿಲ್ಲ. ಸಮಾಜಕಾರ್ಯ ಶಿಕ್ಷಣ ಪರಿಚಿತವಾಗಿ ಎಂಟು ದಶಕಗಳೇ ಕಳೆದಿರುವ ಈ ಹೊತ್ತಿನಲ್ಲಿ ಅದು ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಆತ್ಮಾವಲೋಕನ ಅಗತ್ಯ  ಮತ್ತು ಅನಿವಾರ್ಯವಾಗಿದೆ. ಸಮಸ್ಯೆಗಳನ್ನು ಪರಿಹರಿಸುವ ವಿಧಾನಗಳಿಗೆ ದಾರಿ ತೊರಿಸುವ ಸಮಾಜಕಾರ್ಯ ಶಿಕ್ಷಣವೇ ಸಮಸ್ಯೆಗಳ ಸುಳಿಗೆ ಸಿಲುಕುತ್ತಿರುವುದು ಕಳವಳಕಾರಿ ಸಂಗತಿ. ಈ ನಿಟ್ಟಿನಲ್ಲಿ ‘ಸಮಾಜ ಕಾರ್ಯ ಶಿಕ್ಷಣದ ಪ್ರಸ್ತುತ ಸಮಸ್ಯೆಗಳ’ ಕುರಿತಾದ ಪ್ರಬಂಧ ಮಂಡನೆ, ಬೆಳಕು ಚೆಲ್ಲುವ ಒಂದು ಚಿಕ್ಕ ಪ್ರಯತ್ನವಾಗಿದೆ. ಭಾರತದಲ್ಲಿ ಸಮಾಜಕಾರ್ಯ ಶಿಕ್ಷಣದ ವಿಕಾಸ ಪ್ರೊ. ಸಂಜಯ ಭಟ್ಟ ಬಹಳ ಸ್ಪಷ್ಟವಾಗಿ ಭಾರತದಲ್ಲಿನ ಸಮಾಜಕಾರ್ಯ ಶಿಕ್ಷಣದ ವಿಕಾಸವನ್ನು ಈ ಕೆಳಗಿನ ಹಂತಗಳಲ್ಲಿ ವರ್ಗೀಕರಿಸಿದ್ದಾರೆ. 1.ಪ್ರಾರಂಭದ ಹಂತ(1936-46): ಈ ಹಂತ ಭಾರತದ ಪ್ರಪ್ರಥಮ ಸಮಾಜಕಾರ್ಯ ಶಾಲೆಯಾದ ‘ಸರ್ ದೊರಾಬ್ಜಿ ಟಾಟಾ ಗ್ರ್ಯಾಜುಯೇಟ್ ಸ್ಕೂಲ್ ಆಫ್ ಸೋಸಿಯ

ಚತುರ್ದ್ವಂಸಕ ನಾಶ ಅಭಿಯಾನ-ಚೀನಾದ ಸ್ವಯಂಕೃತ ವಿಪತ್ತು!

ಈ ಅಭಿಯಾನ ಚೀನಾದ "ಮುನ್ನಡೆಯ ಮಹಾಜಿಗಿತ" (Great Leap Forward 1958-1962 ) ನೀತಿಯ ಮೊಟ್ಟ ಮೊದಲ ಕ್ರಮವಾಗಿತ್ತು. ಇದರಡಿಯಲ್ಲಿ ಗುರುತಿಸಿದ ಆ ನಾಲ್ಕು ದ್ವಂಸಕಗಳೆಂದರೆ- ಇಲಿ, ನೊಣ, ಸೊಳ್ಳೆ ಮತ್ತು ಗುಬ್ಬಚ್ಚಿ. ಗುಬ್ಬಚ್ಚಿಗಳನ್ನು ನಾಶಪಡಿಸುವ ಅಭಿಯಾನ"ಗುಬ್ಬಚ್ಚಿಗಳ ಹತ್ಯೆಯ ಅಭಿಯಾನ" ಎಂದೇ ಪ್ರಸಿದ್ಧಿಯಾಗಿತ್ತು. ಇದು ತೀವ್ರ ತೆರನಾದ ಪರಿಸರ ಅಸಮತೋಲನಕ್ಕೆ ಕಾರಣವಾಯಿತು. ಚೀನಾದ ಭೀಕರ ಕ್ಷಾಮಕ್ಕೆ ಕಾರಣವಾಯಿತು. ಇದನ್ನರಿತ ಮಾವೋ ತ್ಸೆ ತುಂಗ್ 1960 ರಲ್ಲಿ ಈ ಅಭಿಯಾನದ ಪಟ್ಟಿಯಿಂದ ಗುಬ್ಬಿಯನ್ನು ಕೈಬಿಟ್ಟು ತಿಗಣೆಯನ್ನು ಸೇರಿಸಿದ. "ಚತುರ್ದ್ವಂಸಕ ನಾಶ ಅಭಿಯಾನ"ವನ್ನು ಮಾವೋ ತ್ಸೆ ತುಂಗ್ 1960 ರಲ್ಲಿ  ಮುನ್ನಡೆಯ ಮಹಾಜಿಗಿತ ಎಂಬ ಆರ್ಥಿಕ ನೀತಿಯ ಭಾಗವಾಗಿ ಪರಿಚಯಿಸಿದ.ಇದರ ಮೂಲ ಉದ್ದೇಶ  ರೋಗ ರುಜಿನಗಳನ್ನು ಹರಡುವ ದ್ವಂಸಕಗಳಾದ ಈ ಕೆಳಗಿನ ಜೀವಿಗಳ ನಿರ್ಮೂಲನೆಯಾಗಿತ್ತು. 1. ಸೊಳ್ಳೆ -ಮಲೇರಿಯಾ ವಾಹಕ 2. ಇಲಿ-ಪ್ಲೇಗ್ ವಾಹಕ 3. ವ್ಯಾಪಕ ನೊಣಗಳು 4. ಗುಬ್ಬಚ್ಚಿಗಳು- ಆಹಾರಧಾನ್ಯ ಮತ್ತು ಹಣ್ಣುಗಳ ದ್ವಂಸಕ. ಗುಬ್ಬಚ್ಚಿಗಳು,ರೈತರನ್ನು ಶೋಷಿಸುವ ಬಂಡವಾಳಶಾಹಿತ್ವದ ಜೀವಿಗಳೆಂದು ಚೀನಾ ಸರ್ಕಾರ ಘೋಷಿಸಿತು. ಈ ಅಭಿಯಾನದ ಪರಿಣಾಮವಾಗಿ ಲಕ್ಷಾಂತರ ಗುಬ್ಬಚ್ಚಿಗಳು ಸತ್ತವು. ಅವುಗಳಿಗೆ ಮರದ ಮೇಲೆ ಅಷ್ಟೆ ಅಲ್ಲ ಆಕಾಶದಲ್ಲಿ ಹಾರಾಡಲು ಅವಕಾಶವಿರಲಿಲ್ಲ. ಗುಬ್ಬಚ್ಚಿ ಗೂಡುಗಳನ್ನು,