Skip to main content

ಸುಟ್ಟಿದ್ದು ಸಂವಿಧಾನವನ್ನಲ್ಲ;ನಿಮ್ನಿಮ್ಮ ಮೂಲಭೂತ ಹಕ್ಕುಗಳನ್ನು ಮತ್ತು ಆತ್ಮಸಾಕ್ಷಿಯನ್ನೂ... !!

ಸುದ್ದಿಯಲ್ಲದ ಸುದ್ದಿಯನ್ನು ಸುದ್ದಿ ಮಾಡುವ ಮನುವ್ಯಾಧಿ ಮಿಡಿಯಾಗಳಿಗೆ ಮನುವಾದಿಗಳು ಸಂವಿಧಾನವನ್ನು ಸುಟ್ಟಿದ್ದು ಸುದ್ದಿಯಾಗಲೇ ಇಲ್ಲ, ಬಹುಶಃ ಒಳಗೊಳಗೆ ಖುಷಿಯಾಗಿ ಒಂದೆರಡು ಲೀಟರ್ ಗೋಮೂತ್ರ, ಎರಡ್ಮೂರು ಬುಟ್ಟಿ ಸೆಗಣಿಯನ್ನು ಜಾಸ್ತಿ ತಿಂದಿರಬೇಕು. ಅಷ್ಟಕ್ಕೂ ಸಂವಿಧಾನವನ್ನು ಯಾವ ಕಾರಣಕ್ಕೆ ಈ ಶತಮೂರ್ಖರು ಸುಟ್ಟರೆಂಬುದೇ ಮಿಲಿಯನ್ ಡಾಲರ್ ಪ್ರಶ್ನೆ.

ಜಗತ್ತಿನ ಅತಿದೊಡ್ಡ ಸಾಮಾಜಿಕ ದಾಖಲೆ, ಭಾರತ ಪ್ರಜಾಪ್ರಭುತ್ವದ ಭದ್ರ ಬುನಾದಿ, ಭಾರತ ಆಡಳಿತದ ಜೀವನ ಮಾರ್ಗ, ಎಲ್ಲಕ್ಕಿಂತ ಹೆಚ್ಚಾಗಿ ಎಲ್ಲ ಭಾರತೀಯರಿಗೂ ಘನತೆಯ ಬದುಕು ಬದುಕಲು ಅವಶ್ಯಕವಾದ ಮೂಲಭೂತ ಹಕ್ಕುಗಳನ್ನೂ, ಜನತೆಯ ಕಲ್ಯಾಣಕ್ಕೆ ಅವಶ್ಯಕವಾದ ರಾಜ್ಯನೀತಿ ನಿರ್ದೇಶಕ ತತ್ವಗಳನ್ನೂ, ಒಂದರೊಂದರ ಮೇಲೆ ಸವಾರಿ ಮಾಡದ ಕಾರ್ಯಾಂಗ, ಶಾಸಕಾಂಗ, ನ್ಯಾಯಾಂಗಗಳನ್ನೂ, ವಿವಿಧ ಸಾಂವಿಧಾನಿಕ ಹುದ್ದೆಗಳು ಮತ್ತು ಸಂಸ್ಥೆಗಳು ಮತ್ತವುಗಳ ಜವಾಬ್ದಾರಿಗಳನ್ನೂ, ಒಕ್ಕೂಟ ವ್ಯವಸ್ಥೆಯನ್ನೆಲ್ಲ ವ್ಯಾಖ್ಯಾನಿಸಿ, ದಾಖಲಿಸಿ, ವಿವರಿಸಿರುವ ಸಂವಿಧಾನ ಸುಟ್ಟವರಿಗೆ ಬಗೆದ ಅಪಚಾರವಾದರೂ ಏನು??

ಮೊದಲು ಮನುಸ್ಮೃತಿಯೂ, ಮಧ್ಯಕಾಲದಲ್ಲಿ ಮುಸಲ್ಮಾನರ ಆಡಳಿತವೂ, ತದನಂತರ ಬ್ರಿಟಿಷರ ಆಡಳಿತವೂ ಭಾರತದ ಆಡಳಿತ ಜೀವನವಿಧಾನವನ್ನು ನಿರ್ಧರಿಸಿ ಭಾರತೀಯರ ಬದುಕನ್ನು, ನಿರ್ಧಿಷ್ಟವಾಗಿ ಸಮಾಜದ ತಳಸಮುದಾಯ, ವರ್ಗಗಳನ್ನು ಅಸಹನೀಯವಾಗಿಸಿದ್ದನ್ನು ಭಾರತೀಯ ಇತಿಹಾಸ ದಾಖಲಿಸಿದೆ. ಬುದ್ಧ, ಬಸವನ ಕ್ರಾಂತಿಗಳ ಭಾಗಶಃ ಸಫಲತೆಯ ನಂತರ ಭಾರತೀಯ ಸಮಾಜವನ್ನು ಅಮೂಲಾಗ್ರವಾಗಿ ಬದಲಾವಣೆಗೆ ಒಳಪಡಿಸಿ ಯಶಸ್ವಿಯಾದ ಕೀರ್ತಿ ಒಬ್ಬನೇ ಒಬ್ಬ ವ್ಯಕ್ತಿಗೆ ಸಲ್ಲುತ್ತದೆ ಎಂಬುದರಲ್ಲಿ ಎರಡು ಮಾತಿಲ್ಲ ಅದು-

"ಡಾ. ಬಾಬಾ ಸಾಹೇಬ್ ಅಂಬೇಡ್ಕರ್ "

ಭಾರತದ ಇದುವರೆಗಿನ ಆಡಳಿತದಲ್ಲಿ ಒಂದೇ ಒಂದು ವ್ಯವಸ್ಥೆಯನ್ನು ಹದಗೆಡಿಸುವ ರಾಜಕೀಯ ವಿಪ್ಲವ, ಪಲ್ಲಟಗಳೇ ಘಟಿಸಿಲ್ಲ, ಪ್ರಜಾಪ್ರಭುತ್ವ ಸಾಧ್ಯವಾದಷ್ಟು ಬಲಿಷ್ಠವಾಗಿ ಮುಂದುವರೆದಿದೆ ಎಂದರೆ ಅದರ ಶ್ರೇಯಸ್ಸು ನಿಸ್ಸಂದೇಹವಾಗಿ ಸಂವಿಧಾನ ಅಥವಾ ಅಂಬೇಡ್ಕರ್ರವರಿಗೆ ಸಲ್ಲಬೇಕು. ಈ ನಿಟ್ಟಿನಲ್ಲಿ ಭಾರತೀಯರೆಲ್ಲ ಅಂಬೇಡ್ಕರ್ರವರಿಗೆ ಚಿರಋಣಿಯಾಗಿರಲೇಬೇಕು.

ಸಂವಿಧಾನ ಅಥವಾ ಅಂಬೇಡ್ಕರ್ರವರನ್ನು ಅರಿಯದೇ ಮಾತಾನಾಡುವ ಮೂರ್ಖರನ್ನು ಕಂಡರೆ ಅಯ್ಯೋ ಎನಿಸುತ್ತದೆ, ಅಷ್ಟೇ ಕೋಪವೂ ಬರುತ್ತದೆ. ಇವರದ್ದು ಕೇವಲ ವಿರೋಧಕ್ಕಾಗಿ ವಿರೋಧ! ನೀವು ಸಂವಿಧಾನವನ್ನು ಸುಟ್ಟಿರಾದರೆ ಅದು ನಿಮಗೆ, ನಿಮ್ಮವರಿಗೆ ಕೊಡಮಾಡಿದ ಜೀವಿಸುವ ಹಕ್ಕನ್ನೊಳಗೊಂಡಂತೆ ಎಲ್ಲ ಮೂಲಭೂತ ಹಕ್ಕುಗಳನ್ನೂ ತಿರಸ್ಕರಿಸಿದಂತೆ!!ಭಾರತದ ಅಖಂಡತೆಯನ್ನು, ಸಾರ್ವಭೌಮತ್ವವನ್ನು ಪ್ರಶ್ನಿಸಿದಂತೆ!!!

ನಿಮಗೆಲ್ಲ ಮೂಲಭೂತ ಹಕ್ಕು ಕೊಟ್ಟಿದ್ದು ತಪ್ಪಾ? ನಿಮಗೆಲ್ಲ ಸಮಾನ ಅವಕಾಶ, ಕಾನೂನಿನ ಮುಂದೆ ಸಮಾನತೆ ಕೊಟ್ಟಿದ್ದು ತಪ್ಪಾ? ನಿಮಗೆಲ್ಲ ವಾಕ್ ಸ್ವಾತಂತ್ರ್ಯ ನೀಡಿದ್ದು ತಪ್ಪಾ? ನಿಮಗೆಲ್ಲ ಶಿಕ್ಷಣ ಪಡೆಯುವ ಹಕ್ಕು ನೀಡಿದ್ದು ತಪ್ಪಾ? ನಿಮಗೆಲ್ಲ ನಿಮ್ನಿಮ್ಮ ಧರ್ಮಾಚರಣೆಯ ಸ್ವಾತಂತ್ರ್ಯ ನೀಡಿದ್ದು ತಪ್ಪಾ? ನಿಮ್ಮ ಅಭ್ಯುದಯಕ್ಕೆ ಸರಕಾರಕ್ಕೆ ಮಾರ್ಗಸೂಚಿಗಳನ್ನು ಒದಗಿಸಿದ್ದು ತಪ್ಪಾ? ನಿಮಗೆಲ್ಲ ಘನತೆಯ, ಸಮಾನತೆಯ, ಸ್ವಾತಂತ್ರ್ಯದ, ಭ್ರಾತೃತ್ವದ ಬದುಕು ಬದುಕಲು ಅವಕಾಶ ನೀಡಿದ್ದೇ ತಪ್ಪಾ? ಸಂವಿಧಾನ ಮಾಡಿದ ತಪ್ಪಾದರೂ ಏನು??

ಸಂವಿಧಾನವೆಂದರೆ ಬರೀ ಮಿಸಲಾತಿಯ ದಾಖಲೆಯಲ್ಲ ಮೂರ್ಖರೇ!! ಅಷ್ಟಕ್ಕೂ positive descrimination ಬಗ್ಗೆ ನೀವು ಸರಿಯಾಗಿ ಅಧ್ಯಯನ ಮಾಡಿದ್ದೇ ಆದರೆ ಮೀಸಲಾತಿಯ ಕಾರಣಕ್ಕೆ ಸಂವಿಧಾನವನ್ನು ವಿರೋಧಿಸುವ ನೀಚತನಕ್ಕೆ ಇಳಿಯುವ ಕೆಲಸಕ್ಕೆ ಮಾಡಲಾರಿರಿ, ಎಲ್ಲ ತಿಳಿದೂ- ತಿಳಿದು ಆ ಕೆಲಸಕ್ಕೆ ಇಳಿದರೆ ನಿಮ್ಮನ್ನು ಬೈಯ್ಯಲು ನನ್ನ ಬಳಿ ಯಾವ ಕೆಟ್ಟ ಬೈಗುಳಗಳೂ ಉಳಿಯುವುದಿಲ್ಲ,ಆ ಬೈಗುಳಗಳಿಗೂ ನೀವು ಯೋಗ್ಯರಲ್ಲ.

ಅಷ್ಟಕ್ಕೂ ಈಗಿರುವ ಸರ್ವೋದಯ ಸಂವಿಧಾನಕ್ಕೆ ಪರ್ಯಾಯವಾಗಿ ಅಥವಾ ಅದಕ್ಕೂ ಅತ್ಯುನ್ನತವಾಗಿ ಸಂವಿಧಾನ ಬರೆಯುವ ಬುದ್ಧಿಮಟ್ಟ ಸುಟ್ಟ ನಪುಂಸಕರಾದ ನಿಮ್ಮಲ್ಲಿ ಯಾರಿಗಾದರೂ ಇದೆಯೇ? ಅಥವಾ ನಿಮಗೆ ಪ್ರಚೋದನೆ ನೀಡಿದ ನಿಮ್ಮ  ಆ ಬೌದ್ಧಿಕ ಅಪ್ಪಂದಿರಿಗೆ ಆ ತಾಕತ್ತು ಇದೆಯೇ?

ಲಾಸ್ಟ ಡ್ರಾಪ್: ಅಂದಹಾಗೆ, ಭಾರತೀಯರಿಗೆ ಅಂಬೇಡ್ಕರ್ರವರ ಕೊಡುಗೆ ಕೇವಲ ಸಂವಿಧಾನ ಮಾತ್ರವಲ್ಲ, ಭಾರತದ ಅರ್ಥಶಾಸ್ತ್ರ , ಸಮಾಜಶಾಸ್ತ್ರ, ರಾಜ್ಯಶಾಸ್ತ್ರ, ಕಾನೂನು, ತತ್ವಶಾಸ್ತ್ರ, ಇತಿಹಾಸಕ್ಕೆ ಅಂಬೇಡ್ಕರರ ಕೊಡುಗೆಯಿದೆ. ಒಟ್ಟಾರೆಯಾಗಿ ಆಧುನಿಕ ಭಾರತದ ನಿಜವಾದ ಜನಕ ಡಾ. ಅಂಬೇಡ್ಕರ್ ಎಂಬುದರಲ್ಲಿ ಎರಡು ಮಾತಿಲ್ಲ. ಅವರೆಂದಿಗೂ ಭಾರತದ ಭಾಗ್ಯವಿಧಾತ!!!

ಓಯ್ ಫೇಕೂ ದೇಶಭಕ್ತರೇ ಎಲ್ಲಿ ಆಯ್ಕೋಂಡ್ ತಿನ್ಲಿಕ್ಕೆ ಹೋಗೀದೀರ, ಸಂವಿಧಾನ ದಹನ ದೇಶದ್ರೋಹ ಅಲ್ಲವೇ..??

Comments

Popular posts from this blog

ಭಾರತೀಯ ಸಮಾಜಕಾರ್ಯ ಶಿಕ್ಷಣದ ಪ್ರಸ್ತುತ ಸಮಸ್ಯೆಗಳು

ಪೀಠಿಕೆ:  ಸಮಾಜಕಾರ್ಯ ಕೇವಲ ಒಂದು ವೃತ್ತಿ ಮಾತ್ರವಾಗಿರದೇ ಅದೊಂದು ಶೈಕ್ಷಣಿಕ ಜ್ಞಾನ ಶಾಖೆಯೂ ಆಗಿದೆ. ಸಮಾಜಕಾರ್ಯ ವೃತ್ತಿಯ ಯಶಸ್ಸು, ಸಮಾಜ ಕಾರ್ಯಕರ್ತನಾದವನು ತರಬೇತಿಯ ವೇಳೆ ಎಷ್ಟರ ಮಟ್ಟಿಗೆ ಅದನ್ನು ಸೈದ್ಧಾಂತಿಕವಾಗಿ, ಪ್ರಾಯೋಗಿಕವಾಗಿ ಅರ್ಥೈಸಿಕೊಂಡು, ಅಳವಡಿಸಿಕೊಳ್ಳುತ್ತಾನೆ ಎಂಬುದರ ಮೇಲೆ ಅವಲಂಬಿತವಾಗಿರುತ್ತದೆ. ಸಮಾಜಕಾರ್ಯ ಶಿಕ್ಷಣ ಮೂಲತಃ ಪಾಶ್ಚಾತ್ಯರ ಕೊಡುಗೆಯಾದ್ದರಿಂದ ಭಾರತದ ಸಂದರ್ಭದಲ್ಲಿ ಅದರ ಅನ್ವಯಿಸುವಿಕೆ ದೇಶೀಕರಣಗೊಂಡಿಲ್ಲ. ಸಮಾಜಕಾರ್ಯ ಶಿಕ್ಷಣ ಪರಿಚಿತವಾಗಿ ಎಂಟು ದಶಕಗಳೇ ಕಳೆದಿರುವ ಈ ಹೊತ್ತಿನಲ್ಲಿ ಅದು ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಆತ್ಮಾವಲೋಕನ ಅಗತ್ಯ  ಮತ್ತು ಅನಿವಾರ್ಯವಾಗಿದೆ. ಸಮಸ್ಯೆಗಳನ್ನು ಪರಿಹರಿಸುವ ವಿಧಾನಗಳಿಗೆ ದಾರಿ ತೊರಿಸುವ ಸಮಾಜಕಾರ್ಯ ಶಿಕ್ಷಣವೇ ಸಮಸ್ಯೆಗಳ ಸುಳಿಗೆ ಸಿಲುಕುತ್ತಿರುವುದು ಕಳವಳಕಾರಿ ಸಂಗತಿ. ಈ ನಿಟ್ಟಿನಲ್ಲಿ ‘ಸಮಾಜ ಕಾರ್ಯ ಶಿಕ್ಷಣದ ಪ್ರಸ್ತುತ ಸಮಸ್ಯೆಗಳ’ ಕುರಿತಾದ ಪ್ರಬಂಧ ಮಂಡನೆ, ಬೆಳಕು ಚೆಲ್ಲುವ ಒಂದು ಚಿಕ್ಕ ಪ್ರಯತ್ನವಾಗಿದೆ. ಭಾರತದಲ್ಲಿ ಸಮಾಜಕಾರ್ಯ ಶಿಕ್ಷಣದ ವಿಕಾಸ ಪ್ರೊ. ಸಂಜಯ ಭಟ್ಟ ಬಹಳ ಸ್ಪಷ್ಟವಾಗಿ ಭಾರತದಲ್ಲಿನ ಸಮಾಜಕಾರ್ಯ ಶಿಕ್ಷಣದ ವಿಕಾಸವನ್ನು ಈ ಕೆಳಗಿನ ಹಂತಗಳಲ್ಲಿ ವರ್ಗೀಕರಿಸಿದ್ದಾರೆ. 1.ಪ್ರಾರಂಭದ ಹಂತ(1936-46): ಈ ಹಂತ ಭಾರತದ ಪ್ರಪ್ರಥಮ ಸಮಾಜಕಾರ್ಯ ಶಾಲೆಯಾದ ‘ಸರ್ ದೊರಾಬ್ಜಿ ಟಾಟಾ ಗ್ರ್ಯಾಜುಯೇಟ್ ಸ್ಕೂಲ್ ಆಫ್ ಸೋಸಿಯ

ಚತುರ್ದ್ವಂಸಕ ನಾಶ ಅಭಿಯಾನ-ಚೀನಾದ ಸ್ವಯಂಕೃತ ವಿಪತ್ತು!

ಈ ಅಭಿಯಾನ ಚೀನಾದ "ಮುನ್ನಡೆಯ ಮಹಾಜಿಗಿತ" (Great Leap Forward 1958-1962 ) ನೀತಿಯ ಮೊಟ್ಟ ಮೊದಲ ಕ್ರಮವಾಗಿತ್ತು. ಇದರಡಿಯಲ್ಲಿ ಗುರುತಿಸಿದ ಆ ನಾಲ್ಕು ದ್ವಂಸಕಗಳೆಂದರೆ- ಇಲಿ, ನೊಣ, ಸೊಳ್ಳೆ ಮತ್ತು ಗುಬ್ಬಚ್ಚಿ. ಗುಬ್ಬಚ್ಚಿಗಳನ್ನು ನಾಶಪಡಿಸುವ ಅಭಿಯಾನ"ಗುಬ್ಬಚ್ಚಿಗಳ ಹತ್ಯೆಯ ಅಭಿಯಾನ" ಎಂದೇ ಪ್ರಸಿದ್ಧಿಯಾಗಿತ್ತು. ಇದು ತೀವ್ರ ತೆರನಾದ ಪರಿಸರ ಅಸಮತೋಲನಕ್ಕೆ ಕಾರಣವಾಯಿತು. ಚೀನಾದ ಭೀಕರ ಕ್ಷಾಮಕ್ಕೆ ಕಾರಣವಾಯಿತು. ಇದನ್ನರಿತ ಮಾವೋ ತ್ಸೆ ತುಂಗ್ 1960 ರಲ್ಲಿ ಈ ಅಭಿಯಾನದ ಪಟ್ಟಿಯಿಂದ ಗುಬ್ಬಿಯನ್ನು ಕೈಬಿಟ್ಟು ತಿಗಣೆಯನ್ನು ಸೇರಿಸಿದ. "ಚತುರ್ದ್ವಂಸಕ ನಾಶ ಅಭಿಯಾನ"ವನ್ನು ಮಾವೋ ತ್ಸೆ ತುಂಗ್ 1960 ರಲ್ಲಿ  ಮುನ್ನಡೆಯ ಮಹಾಜಿಗಿತ ಎಂಬ ಆರ್ಥಿಕ ನೀತಿಯ ಭಾಗವಾಗಿ ಪರಿಚಯಿಸಿದ.ಇದರ ಮೂಲ ಉದ್ದೇಶ  ರೋಗ ರುಜಿನಗಳನ್ನು ಹರಡುವ ದ್ವಂಸಕಗಳಾದ ಈ ಕೆಳಗಿನ ಜೀವಿಗಳ ನಿರ್ಮೂಲನೆಯಾಗಿತ್ತು. 1. ಸೊಳ್ಳೆ -ಮಲೇರಿಯಾ ವಾಹಕ 2. ಇಲಿ-ಪ್ಲೇಗ್ ವಾಹಕ 3. ವ್ಯಾಪಕ ನೊಣಗಳು 4. ಗುಬ್ಬಚ್ಚಿಗಳು- ಆಹಾರಧಾನ್ಯ ಮತ್ತು ಹಣ್ಣುಗಳ ದ್ವಂಸಕ. ಗುಬ್ಬಚ್ಚಿಗಳು,ರೈತರನ್ನು ಶೋಷಿಸುವ ಬಂಡವಾಳಶಾಹಿತ್ವದ ಜೀವಿಗಳೆಂದು ಚೀನಾ ಸರ್ಕಾರ ಘೋಷಿಸಿತು. ಈ ಅಭಿಯಾನದ ಪರಿಣಾಮವಾಗಿ ಲಕ್ಷಾಂತರ ಗುಬ್ಬಚ್ಚಿಗಳು ಸತ್ತವು. ಅವುಗಳಿಗೆ ಮರದ ಮೇಲೆ ಅಷ್ಟೆ ಅಲ್ಲ ಆಕಾಶದಲ್ಲಿ ಹಾರಾಡಲು ಅವಕಾಶವಿರಲಿಲ್ಲ. ಗುಬ್ಬಚ್ಚಿ ಗೂಡುಗಳನ್ನು,