Skip to main content

💚ಕನ್ನಡತಿ ಮತ್ತು ಕರುನಾಡ ಯೋಧ💜

ರಣರಂಗದೀ ಕಾದಾಡಿ
ಜಲದಾಹದೀಂ
ಬಂದನ್ ಕರುನಾಡ ಯೋಧ
ಶ್ವೇತಾಶ್ವವಂ ಪೇರಿ!


ಮೊದಲೇ ಬಿಸಿಲುಗಾಲ
ಸುಡುವ ಸೂರ್ಯ
ನಾಡಿಗಾಗಿ ಹೋರಾಡಿ
ಬಳಲಿ ಬೆಂಡಾದ ಯೋಧ

ಬಯಲುಸೀಮೆಯಲ್
ನೀರ ಅದಾವ ಮೂಲಗಳಿಲ್ಲ
ಬತ್ತಿ ಬಿರುಕು ಬಿಟ್ಟಿವೆಯಲ್ಲ
ಬಿಸಿಲ ಹೊಡೆತಕ್ಕೆ

ಇಂತಿರುವಾಗ ದೂರದಲ್ಲಿ
ದೊಡ್ಡದಾದೊಂದು
ಬೇವಿನ ಗಿಡದಡಿಗೆ
ಸುಂದರವಾದೊಂದು ಗುಡಿಸಲು

ತವಕಿಸುತ ಸಾಗಿದ ಯೋಧ
ಗುಡಿಸಲ ಬಳಿಗೆ
ಕೂಗಿದ "ನೀರು ಕೊಡುವಿರ
ತುಸು ಇಲ್ಲದಿರೇ ಸಾಯುವೆ"

ಕೂಗು ಕೇಳಿದ ತರುಣಿಯೋರ್ವಳ್
ಹೊರಬಂದು ನೋಡಿದರೆ
ತ್ರಾಣವಿಲ್ಲದೇ ಕುಸಿದು
ಬಿದ್ದಿರುವ ಯೋಧ

ವಿಳಂಬಿಸದೇ ಆ ಕನ್ನಡತಿ
ತಂದಳ್ ತಂಪಾದ ಮಜ್ಜಿಗೆಯ
ಕೊಟ್ಟಳ್ ಅವನಿಗೆ ವಾತ್ಸಲ್ಯವ
ಬೆರೆಸಿ, ಕುಡಿದ ಯೋಧ

ಯೋಧನ ಶ್ವೇತಾಶ್ವಕ್ಕೂ
ಕರುಣಿಸಿದಳು ನೀರು-ಆಹಾರ
ಯೋಧನಲ್ಲೀಗ ಶಕ್ತಿಯ ಸಂಚಲನ
ತರುಣಿಗೆ ರೋಮಾಂಚನ

ಕ್ಷಣ ಹೊತ್ತಿನವರೆಗೆ
ಮಾತು-ಮಂಥನ
ರಣರಂಗದ ಚಿತ್ರಣ
ತರುಣಿಯಿಂದ ಪ್ರೇಮ ನಿವೇದನ

ಕನ್ನಡತಿಯ ಅಭಿಮಾನಕ್ಕೆ
ಕೈ ಮುಗಿದ ವೀರಯೋಧ
ಹೇಳಿದನಂತ ಧನ್ಯವಾದ
ಹೊರಡಲಣಿಯಾದ

ತರುಣಿಯ ಕಣ್ಣಲ್ಲಿ ಪ್ರೇಮ ಭಾಷ್ಪ
ಗುರುತಿಸಿದ ಯೋಧ
ರಣರಂಗದಲೀ ಬದುಕಿದರೆ
ಮತ್ತೆ ಬರುವೆನೆಂದ್ ಮುತ್ತಿಕ್ಕಿದ ಆಕೆಯ ಕೈಗೆ

"ಇದು ಇಳಿಸಂಜೆ ಹೊತ್ತು
ಇರಬಹುದು ತಾವಿವತ್ತು
ವಿಶ್ರಮಿಸಿ ಹೋಗಬಹುದಲ್ಲ ನಾಳೆ"
ಎಂದಳವಳು ಕಾಳಜಿಯಿಂದ

"ಇಲ್ಲ ತರುಣಿ ಧನ್ಯವಾದ
ಆಪತ್ತಿದೆ ಕರುನಾಡಿಗೆ
ನನ್ನ ಅಗತ್ಯತೆಯಿದೆ
ಕನ್ನಡಿಗರಿಗೆ" ಎಂದೇರಿದ ಅಶ್ವವನ್

ದುಃಖ ತಡೆಯಲಾರದೇ
ಮತ್ತೇ ತೋರಗೊಡದೇ ಹರಸಿದಳಾ ತರುಣಿ
"ಮತ್ತೇ ಬನ್ನಿ ವಿಜಯಶಾಲಿಯಾಗಿ
ಸದಾ ಕಾಯುವೇ ನಿಮಗಾಗಿ"!!

Comments

Popular posts from this blog

ನಗುವುದೋ, ಅಳುವುದೋ ನೀವೇ ಹೇಳಿ!

 ಇಡೀ ಜಗತ್ತೇ ವಿಜ್ಞಾನ, ತಂತ್ರಜ್ಞಾನ, ವೈಚಾರಿಕತೆ, ವೈಜ್ಞಾನಿಕತೆಯೆಡೆಗೆ ಬಹಳ ತೀವ್ರಗತಿಯಲ್ಲಿ ತೆರೆದುಕೊಳ್ಳುತ್ತಿದೆ. ಪ್ರತಿ ಮಿಲಿ ಸೆಕೆಂಡುಗಳಿಗೂ ತಳಮಟ್ಟದ ಮಾನವ ಜೀವನವನ್ನು ಸುಗಮಗೊಳಿಸಬಲ್ಲ ಸಂಶೋಧನೆಗಳಾಗುತ್ತಿವೆ. ಬದಲಾವಣೆ ಜಗದ ನಿಯಮ, ಜೀವಂತಿಕೆಯ ಲಕ್ಷಣ. ಬದಲಾವಣೆಗೆ ಸ್ಪಂದಿಸದಿರುವಿಕೆ ಜೀವಂತಿಕೆಯ ಲಕ್ಷಣವೇ ಅಲ್ಲ. ಬದಲಾಗದ ಸಮಾಜ ಅವನತಿಯತ್ತ ಸಾಗುತ್ತಿರುವ ಅಥವಾ ಕಾಲಚಕ್ರದಲ್ಲಿ ಹಿಮ್ಮುಖವಾಗಿ ಚಲಿಸುತ್ತಿರುವ ಸಂಕೇತ. ಮಾನವ ಜೀವಿಯ ಪ್ರತಿ ತಲೆಮಾರು ಸಾಧ್ಯವಾದಷ್ಟು ನಾಗರಿಕತೆ ಅಥವಾ ಮಾನವೀಯತೆಯನ್ನು ಗಳಿಸುತ್ತ ಈಗಿರುವ ಮಟ್ಟಕ್ಕೆ ಬಂದು ತಲುಪಿದೆ.ಅಂದರೆ ಮುಮ್ಮುಖ ಚಲನೆ ಎಂಬುದು ಸಾಧ್ಯವಾದಷ್ಟು ಜೀವಪರ. ಬಹಳ ವಿಷಾಧದ ಸಂಗತಿಯೇನೆಂದರೆ ಹಿಮ್ಮುಖವಾಗಿ ಅಥವಾ ಅನಾಗರೀಕತೆಯೆಡೆಗೆ ತಲುಪಲು ಹವಣಿಸುತ್ತಿರುವ ಜಗತ್ತು ಕೂಡ ಇದೆ. ಈ ಹವಣಿಕೆಗೆ ವೇಗವರ್ಧಕವಾಗಿ ವಿಕೃತ, ವಿಕ್ಷಿಪ್ತ ರಾಜಕೀಯ ವ್ಯವಸ್ಥೆಯೂ ಇರುತ್ತದೆ. ಈ ವಿಕ್ಷಿಪ್ತ ಮತ್ತು ವಿಕೃತ ರಾಜಕೀಯ ವ್ಯವಸ್ಥೆ ಸಮಾಜವನ್ನು ತಾನಿರುವ ಮಟ್ಟದಿಂದ ಒಂದು ಹೆಜ್ಜೆ ಮುಂದೆ ಹೋಗಿ ಯೋಚಿಸುವುದನ್ನು ಯಾವ ಕಾರಣಕ್ಕೂ ಸಹಿಸುವುದಿಲ್ಲ. ಬದಲಾಗಿ ಮತ್ತೆ ಹಿಮ್ಮುಖವಾಗಿ ತಳ್ಳುತ್ತದೆ. ಸಮಾಜದ ಮುಮ್ಮುಖ ಚಲನೆ ತನ್ನ ಹಿಡೆನ್ ಅಜೆಂಡಾಗಳಿಗೆ ಎಲ್ಲಿ ಮುಳುವಾಗಿಬಿಡುತ್ತದೋ ಎಂಬ ಭಯವೇ ಇದಕ್ಕೆ ಕಾರಣ. ಚರಿತ್ರೆಯ ಚಿತಾಭಸ್ಮವನ್ನು ಕೆದಕಿ ರಾಮ,ರಾವಣ, ಬಾಬರ, ಟಿಪ್ಪು,  ನೆಹರು, ಗಾಂಧ...

ಚತುರ್ದ್ವಂಸಕ ನಾಶ ಅಭಿಯಾನ-ಚೀನಾದ ಸ್ವಯಂಕೃತ ವಿಪತ್ತು!

ಈ ಅಭಿಯಾನ ಚೀನಾದ "ಮುನ್ನಡೆಯ ಮಹಾಜಿಗಿತ" (Great Leap Forward 1958-1962 ) ನೀತಿಯ ಮೊಟ್ಟ ಮೊದಲ ಕ್ರಮವಾಗಿತ್ತು. ಇದರಡಿಯಲ್ಲಿ ಗುರುತಿಸಿದ ಆ ನಾಲ್ಕು ದ್ವಂಸಕಗಳೆಂದರೆ- ಇಲಿ, ನೊಣ, ಸೊಳ್ಳೆ ಮತ್ತು ಗುಬ್ಬಚ್ಚಿ. ಗುಬ್ಬಚ್ಚಿಗಳನ್ನು ನಾಶಪಡಿಸುವ ಅಭಿಯಾನ"ಗುಬ್ಬಚ್ಚಿಗಳ ಹತ್ಯೆಯ ಅಭಿಯಾನ" ಎಂದೇ ಪ್ರಸಿದ್ಧಿಯಾಗಿತ್ತು. ಇದು ತೀವ್ರ ತೆರನಾದ ಪರಿಸರ ಅಸಮತೋಲನಕ್ಕೆ ಕಾರಣವಾಯಿತು. ಚೀನಾದ ಭೀಕರ ಕ್ಷಾಮಕ್ಕೆ ಕಾರಣವಾಯಿತು. ಇದನ್ನರಿತ ಮಾವೋ ತ್ಸೆ ತುಂಗ್ 1960 ರಲ್ಲಿ ಈ ಅಭಿಯಾನದ ಪಟ್ಟಿಯಿಂದ ಗುಬ್ಬಿಯನ್ನು ಕೈಬಿಟ್ಟು ತಿಗಣೆಯನ್ನು ಸೇರಿಸಿದ. "ಚತುರ್ದ್ವಂಸಕ ನಾಶ ಅಭಿಯಾನ"ವನ್ನು ಮಾವೋ ತ್ಸೆ ತುಂಗ್ 1960 ರಲ್ಲಿ  ಮುನ್ನಡೆಯ ಮಹಾಜಿಗಿತ ಎಂಬ ಆರ್ಥಿಕ ನೀತಿಯ ಭಾಗವಾಗಿ ಪರಿಚಯಿಸಿದ.ಇದರ ಮೂಲ ಉದ್ದೇಶ  ರೋಗ ರುಜಿನಗಳನ್ನು ಹರಡುವ ದ್ವಂಸಕಗಳಾದ ಈ ಕೆಳಗಿನ ಜೀವಿಗಳ ನಿರ್ಮೂಲನೆಯಾಗಿತ್ತು. 1. ಸೊಳ್ಳೆ -ಮಲೇರಿಯಾ ವಾಹಕ 2. ಇಲಿ-ಪ್ಲೇಗ್ ವಾಹಕ 3. ವ್ಯಾಪಕ ನೊಣಗಳು 4. ಗುಬ್ಬಚ್ಚಿಗಳು- ಆಹಾರಧಾನ್ಯ ಮತ್ತು ಹಣ್ಣುಗಳ ದ್ವಂಸಕ. ಗುಬ್ಬಚ್ಚಿಗಳು,ರೈತರನ್ನು ಶೋಷಿಸುವ ಬಂಡವಾಳಶಾಹಿತ್ವದ ಜೀವಿಗಳೆಂದು ಚೀನಾ ಸರ್ಕಾರ ಘೋಷಿಸಿತು. ಈ ಅಭಿಯಾನದ ಪರಿಣಾಮವಾಗಿ ಲಕ್ಷಾಂತರ ಗುಬ್ಬಚ್ಚಿಗಳು ಸತ್ತವು. ಅವುಗಳಿಗೆ ಮರದ ಮೇಲೆ ಅಷ್ಟೆ ಅಲ್ಲ ಆಕಾಶದಲ್ಲಿ ಹಾರಾಡಲು ಅವಕಾಶವಿರಲಿಲ್ಲ. ಗುಬ್ಬಚ್ಚಿ ಗೂಡುಗಳನ್ನು, ...

ಸುಟ್ಟಿದ್ದು ಸಂವಿಧಾನವನ್ನಲ್ಲ;ನಿಮ್ನಿಮ್ಮ ಮೂಲಭೂತ ಹಕ್ಕುಗಳನ್ನು ಮತ್ತು ಆತ್ಮಸಾಕ್ಷಿಯನ್ನೂ... !!

ಸುದ್ದಿಯಲ್ಲದ ಸುದ್ದಿಯನ್ನು ಸುದ್ದಿ ಮಾಡುವ ಮನುವ್ಯಾಧಿ ಮಿಡಿಯಾಗಳಿಗೆ ಮನುವಾದಿಗಳು ಸಂವಿಧಾನವನ್ನು ಸುಟ್ಟಿದ್ದು ಸುದ್ದಿಯಾಗಲೇ ಇಲ್ಲ, ಬಹುಶಃ ಒಳಗೊಳಗೆ ಖುಷಿಯಾಗಿ ಒಂದೆರಡು ಲೀಟರ್ ಗೋಮೂತ್ರ, ಎರಡ್ಮೂರು ಬುಟ್ಟಿ ಸೆಗಣಿಯನ್ನು ಜಾಸ್ತಿ ತಿಂದಿರಬೇಕು. ಅಷ್ಟಕ್ಕೂ ಸಂವಿಧಾನವನ್ನು ಯಾವ ಕಾರಣಕ್ಕೆ ಈ ಶತಮೂರ್ಖರು ಸುಟ್ಟರೆಂಬುದೇ ಮಿಲಿಯನ್ ಡಾಲರ್ ಪ್ರಶ್ನೆ. ಜಗತ್ತಿನ ಅತಿದೊಡ್ಡ ಸಾಮಾಜಿಕ ದಾಖಲೆ, ಭಾರತ ಪ್ರಜಾಪ್ರಭುತ್ವದ ಭದ್ರ ಬುನಾದಿ, ಭಾರತ ಆಡಳಿತದ ಜೀವನ ಮಾರ್ಗ, ಎಲ್ಲಕ್ಕಿಂತ ಹೆಚ್ಚಾಗಿ ಎಲ್ಲ ಭಾರತೀಯರಿಗೂ ಘನತೆಯ ಬದುಕು ಬದುಕಲು ಅವಶ್ಯಕವಾದ ಮೂಲಭೂತ ಹಕ್ಕುಗಳನ್ನೂ, ಜನತೆಯ ಕಲ್ಯಾಣಕ್ಕೆ ಅವಶ್ಯಕವಾದ ರಾಜ್ಯನೀತಿ ನಿರ್ದೇಶಕ ತತ್ವಗಳನ್ನೂ, ಒಂದರೊಂದರ ಮೇಲೆ ಸವಾರಿ ಮಾಡದ ಕಾರ್ಯಾಂಗ, ಶಾಸಕಾಂಗ, ನ್ಯಾಯಾಂಗಗಳನ್ನೂ, ವಿವಿಧ ಸಾಂವಿಧಾನಿಕ ಹುದ್ದೆಗಳು ಮತ್ತು ಸಂಸ್ಥೆಗಳು ಮತ್ತವುಗಳ ಜವಾಬ್ದಾರಿಗಳನ್ನೂ, ಒಕ್ಕೂಟ ವ್ಯವಸ್ಥೆಯನ್ನೆಲ್ಲ ವ್ಯಾಖ್ಯಾನಿಸಿ, ದಾಖಲಿಸಿ, ವಿವರಿಸಿರುವ ಸಂವಿಧಾನ ಸುಟ್ಟವರಿಗೆ ಬಗೆದ ಅಪಚಾರವಾದರೂ ಏನು?? ಮೊದಲು ಮನುಸ್ಮೃತಿಯೂ, ಮಧ್ಯಕಾಲದಲ್ಲಿ ಮುಸಲ್ಮಾನರ ಆಡಳಿತವೂ, ತದನಂತರ ಬ್ರಿಟಿಷರ ಆಡಳಿತವೂ ಭಾರತದ ಆಡಳಿತ ಜೀವನವಿಧಾನವನ್ನು ನಿರ್ಧರಿಸಿ ಭಾರತೀಯರ ಬದುಕನ್ನು, ನಿರ್ಧಿಷ್ಟವಾಗಿ ಸಮಾಜದ ತಳಸಮುದಾಯ, ವರ್ಗಗಳನ್ನು ಅಸಹನೀಯವಾಗಿಸಿದ್ದನ್ನು ಭಾರತೀಯ ಇತಿಹಾಸ ದಾಖಲಿಸಿದೆ. ಬುದ್ಧ, ಬಸವನ ಕ್ರಾಂತಿಗಳ ಭಾಗಶಃ ಸಫ...