Skip to main content

Posts

ಸಹ್ಯಾದ್ರಿಯ ಮಡಿಲಲ್ಲಿ...!!

ಅದೋ ಅಲ್ನೋಡಿ ಅದೇ ನನ್ನೂರು! ಸಹ್ಯಾದ್ರಿಯ ಮಡಿಲಲ್ಲಿ, ಮಲಪ್ರಭೆಯ ಬದಿಯಲ್ಲಿ||ಪ|| ಆಹಾ ಜಂಬೂ ನೇರಳೆ ಹುಳಿ-ಸಿಹಿಯ ಕವಳೆ ಹುಳಿ-ಒಗರಿನ ನೆಲ್ಲಿ ಮಾವು, ಹಲಸು, ಪೇರಲ, ಅಲ್ಲಲ್ಲಿ||೧|| ಕನ್ನಡ ಕೋಗಿಲೆಯ ಕಲರವ ಹುಲಿಯ ಘರ್ಜನೆ ಆನೆಯ ಓಂಕಾರ ಮಣ್ಣ ಕಣ ಕಣದಲ್ಲೂ ನಿಸರ್ಗ ಝೇಂಕಾರ||೨|| ಮುಂಜಾನೆಯ ಇಬ್ಬನಿ ನಡು ಹಗಲಿನ ಸುಳಿಗಾಳಿ ಇಳಿಸಂಜೆಯ ಗೋಧೂಳಿ ಸುಂದರ ಕಾಡ ಹೂಗಳ ಓಕುಳಿ||೩|| ಹಿತ ಹವೆಯ ಬೇಸಿಗೆ ಧಾರಾಕಾರ ಮಳೆಗಾಲ ಥರಗುಟ್ಟಿಸುವ ಚಳಿಗಾಲ ಸಕಲ ಜೀವಾತ್ಮರಿಗೂ ಉಳಿಗಾಲ||೪|| (ಈ ಸಲದ ಕನ್ನಡ ರಾಜ್ಯೋತ್ಸವಕ್ಕೆ ಅರ್ಪಣೆ)

ಪ್ರತ್ಯೇಕ ರಾಜ್ಯದ ಅವಶ್ಯಕತೆ ಇದೆಯೇ?

ಉತ್ತರ ಕರ್ನಾಟಕ ರಾಜ್ಯದ ಬಗ್ಗೆ ಪರ-ವಿರೋಧ ಚರ್ಚೆಗಳು ನಡೆಯುತ್ತಿರುವ ಈ ಹೊತ್ತಿನಲ್ಲಿ, ನಿಜವಾಗಲೂ ಅದರ ಅಗತ್ಯತೆ ಇದೆಯೇ? ಅಗತ್ಯವಿದ್ದರೆ ಏಕೆ? ಯಾರಿಗೆ ಅಗತ್ಯತೆಯಿದೆ? ಆ ಅಗತ್ಯತೆಗೆ ಕಾರಣಗಳೇನು? ಕಾರಣ ಯಾರು? ಎಂಬುದನ್ನು ತಿಳಿಯಬೇಕಾದುದು ತುಂಬ ಅಗತ್ಯ. ನಮಗೆಲ್ಲ ತಿಳಿದ ಹಾಗೆ ಭಾರತ ಸ್ವತಂತ್ರ ಪೂರ್ವದಲ್ಲಿ ನೂರಾರು ಚಿಕ್ಕ ಪುಟ್ಟ ಸಂಸ್ಥಾನಗಳ ಭೂಭಾಗವಾಗಿತ್ತು. ಸ್ವಾತಂತ್ರ್ಯಾನಂತರ ಭಾಷಾವಾರು ಪ್ರಾಂತ್ಯಗಳು ರಚನೆಯಾದವು. ಈ ಮೂಲಕ ಆಯಾ ಭಾಷೆಗಳನ್ನಾಡುವ ಜನರು ಒಟ್ಟಾದರು. ಬಲಿಷ್ಠ ರಾಜ್ಯಗಳನ್ನು ಕಟ್ಟಿ ಬೆಳೆಸಿದರು. ಬಲಿಷ್ಠತೆಯ ಜೊತೆಗೆ ಭಾಷಾವಾರು ಪ್ರಾಂತ್ಯಗಳಲ್ಲಿ ಪ್ರಾದೇಶಿಕ ಅಸಮಾನತೆಗಳೂ ಹೆಚ್ಚಿದವು. ಈ ಅಸಮಾನತೆಗಳು ಒಮ್ಮಿಂದೊಮ್ಮೆಲೇ ಹುಟ್ಟಿ ಹೆಚ್ಚಿದವುಗಳಲ್ಲ. ಇವುಗಳ ಹುಟ್ಟಿಗೆ ನೂರಾರು ಕಾರಣಗಳಿವೆ. ವಿಷಯವನ್ನು ಕರ್ನಾಟಕದ ಮಟ್ಟಿಗೆ ಸೀಮಿತಗೊಳಿಸಿ ನೋಡುವುದಾದರೆ. ಮೈಸೂರು, ಹೈದ್ರಾಬಾದ್, ಮುಂಬೈ, ಕರಾವಳಿ ಕರ್ನಾಟಕ ಎಂಬ ನಾಲಕ್ಕೂ ವಿಭಾಗಗಳಲ್ಲಿ ಅತೀ ಹಿಂದುಳಿದವು ಹೈದ್ರಾಬಾದ್ ಮತ್ತು ಮುಂಬೈ ಕರ್ನಾಟಕ (ಎರಡೂ ಉತ್ತರ ಕರ್ನಾಟಕದವುಗಳು).  ಹೈದ್ರಾಬಾದ್ ಕರ್ನಾಟಕ ಭಾಗದ ಇಚ್ಛಾಶಕ್ತಿಯುಳ್ಳ ರಾಜಕಾರಣಿಗಳು ಮತ್ತು ಜನರು 371 ಜೆ ಮೂಲಕ ಮೂಲಕ ತಮ್ಮ ಅಭಿವೃದ್ಧಿಗೆ ತಾವೇ ನಾಂದಿ ಹಾಡಿಕೊಂಡಿದ್ದಾರೆ. ಇತ್ತ ಮುಂಬೈ ಕರ್ನಾಟಕ, ಇಚ್ಛಾಶಕ್ತಿಯೇ ಇಲ್ಲದ ರಾಜಕಾರಣಿಗಳಿಂದ ಅನಾಥ ಶಿಶುವಾಗಿದೆ. ಮಾಹಿತಿ ತಂತ್ರಜ್ಞಾನ, ಜ...

ಸುಟ್ಟಿದ್ದು ಸಂವಿಧಾನವನ್ನಲ್ಲ;ನಿಮ್ನಿಮ್ಮ ಮೂಲಭೂತ ಹಕ್ಕುಗಳನ್ನು ಮತ್ತು ಆತ್ಮಸಾಕ್ಷಿಯನ್ನೂ... !!

ಸುದ್ದಿಯಲ್ಲದ ಸುದ್ದಿಯನ್ನು ಸುದ್ದಿ ಮಾಡುವ ಮನುವ್ಯಾಧಿ ಮಿಡಿಯಾಗಳಿಗೆ ಮನುವಾದಿಗಳು ಸಂವಿಧಾನವನ್ನು ಸುಟ್ಟಿದ್ದು ಸುದ್ದಿಯಾಗಲೇ ಇಲ್ಲ, ಬಹುಶಃ ಒಳಗೊಳಗೆ ಖುಷಿಯಾಗಿ ಒಂದೆರಡು ಲೀಟರ್ ಗೋಮೂತ್ರ, ಎರಡ್ಮೂರು ಬುಟ್ಟಿ ಸೆಗಣಿಯನ್ನು ಜಾಸ್ತಿ ತಿಂದಿರಬೇಕು. ಅಷ್ಟಕ್ಕೂ ಸಂವಿಧಾನವನ್ನು ಯಾವ ಕಾರಣಕ್ಕೆ ಈ ಶತಮೂರ್ಖರು ಸುಟ್ಟರೆಂಬುದೇ ಮಿಲಿಯನ್ ಡಾಲರ್ ಪ್ರಶ್ನೆ. ಜಗತ್ತಿನ ಅತಿದೊಡ್ಡ ಸಾಮಾಜಿಕ ದಾಖಲೆ, ಭಾರತ ಪ್ರಜಾಪ್ರಭುತ್ವದ ಭದ್ರ ಬುನಾದಿ, ಭಾರತ ಆಡಳಿತದ ಜೀವನ ಮಾರ್ಗ, ಎಲ್ಲಕ್ಕಿಂತ ಹೆಚ್ಚಾಗಿ ಎಲ್ಲ ಭಾರತೀಯರಿಗೂ ಘನತೆಯ ಬದುಕು ಬದುಕಲು ಅವಶ್ಯಕವಾದ ಮೂಲಭೂತ ಹಕ್ಕುಗಳನ್ನೂ, ಜನತೆಯ ಕಲ್ಯಾಣಕ್ಕೆ ಅವಶ್ಯಕವಾದ ರಾಜ್ಯನೀತಿ ನಿರ್ದೇಶಕ ತತ್ವಗಳನ್ನೂ, ಒಂದರೊಂದರ ಮೇಲೆ ಸವಾರಿ ಮಾಡದ ಕಾರ್ಯಾಂಗ, ಶಾಸಕಾಂಗ, ನ್ಯಾಯಾಂಗಗಳನ್ನೂ, ವಿವಿಧ ಸಾಂವಿಧಾನಿಕ ಹುದ್ದೆಗಳು ಮತ್ತು ಸಂಸ್ಥೆಗಳು ಮತ್ತವುಗಳ ಜವಾಬ್ದಾರಿಗಳನ್ನೂ, ಒಕ್ಕೂಟ ವ್ಯವಸ್ಥೆಯನ್ನೆಲ್ಲ ವ್ಯಾಖ್ಯಾನಿಸಿ, ದಾಖಲಿಸಿ, ವಿವರಿಸಿರುವ ಸಂವಿಧಾನ ಸುಟ್ಟವರಿಗೆ ಬಗೆದ ಅಪಚಾರವಾದರೂ ಏನು?? ಮೊದಲು ಮನುಸ್ಮೃತಿಯೂ, ಮಧ್ಯಕಾಲದಲ್ಲಿ ಮುಸಲ್ಮಾನರ ಆಡಳಿತವೂ, ತದನಂತರ ಬ್ರಿಟಿಷರ ಆಡಳಿತವೂ ಭಾರತದ ಆಡಳಿತ ಜೀವನವಿಧಾನವನ್ನು ನಿರ್ಧರಿಸಿ ಭಾರತೀಯರ ಬದುಕನ್ನು, ನಿರ್ಧಿಷ್ಟವಾಗಿ ಸಮಾಜದ ತಳಸಮುದಾಯ, ವರ್ಗಗಳನ್ನು ಅಸಹನೀಯವಾಗಿಸಿದ್ದನ್ನು ಭಾರತೀಯ ಇತಿಹಾಸ ದಾಖಲಿಸಿದೆ. ಬುದ್ಧ, ಬಸವನ ಕ್ರಾಂತಿಗಳ ಭಾಗಶಃ ಸಫ...

ಬಸವ ತತ್ವಗಳೆಂಬ ಕ್ರಾಂತಿಯ ಬೀಜಗಳು ಮತ್ತವುಗಳ ಮರುವ್ಯಾಖ್ಯಾನದ ಅವಶ್ಯಕತೆ

ಬಸವಣ್ಣನವರನ್ನು ಎತ್ತನ್ನಾಗಿಸಿ ಪೂಜಿಸುತ್ತಿರುವವರ ಬಗ್ಗೆ ತೀವ್ರ ತೆರನಾದ ಅನುಕಂಪವೂ, ಸಿಟ್ಟೂ ಎರಡೂ ಇವೆ. ಈ ತೆರನಾದ ಆಚರಣೆಗಳು, ಬಸವ ತತ್ವಗಳನ್ನು ಮೂಲೆಗುಂಪಾಗಿಸುವ ಮುಂದುವರೆದ ಭಾಗಗಳೂ, ಬಸವನೆಂಬ ಮಹಾಮಾನವತಾವಾದಿಗೆ ಎಸಗುವ ಬಹುದೊಡ್ಡ ಅಪಚಾರಗಳೂ ಎಂದು ನಾನು ಪರಿಭಾವಿಸುತ್ತೇನೆ. ಬಸವಣ್ಣನ ಬಹುಮುಖ ವ್ಯಕ್ತಿತ್ವವನ್ನು ತಲೆಮಾರುಗಳಿಗೆ ಕಟ್ಟಿಕೊಡುವಲ್ಲಿ ಇಡೀ ಸಮಾಜ ಸೋತಿದೆ ಅಥವಾ ಬೇಕೆಂದೇ ಬದಿಗಿರಿಸಿದೆ. ಉದಾಹರಣೆಗೆ ನಾವೋದುತ್ತಿರುವ ಪಠ್ಯ ಪುಸ್ತಕಗಳಲ್ಲಿ ಬಸವಣ್ಣನವರನ್ನು ಕೇವಲ ಶಂಕರ, ರಾಮಾನುಜ, ವಿದ್ಯಾರಣ್ಯರ ಸಾಲಿನಲ್ಲಿ ಬರುವ ಒಬ್ಬ ಸಮಾಜ ಸುಧಾರಕನನ್ನಾಗಿಯೋ ಇಲ್ಲ, ಕೇವಲ ಭಕ್ತಿ ಪಂಥದಲ್ಲಿ ಬರುವ ಭಕ್ತನನ್ನಾಗಿಯೋ ಬಿಂಬಿಸಲಾಗಿದೆಯೇ ವಿನಃ ಬಸವಣ್ಣನ ಬಹುಮುಖ ವ್ಯಕ್ತಿತ್ವವನ್ನು, ಅವರ ಮಾನವತೆ ಪರ ವಿಚಾರಗಳನ್ನು ತೆರೆದಿಡುವಲ್ಲಿನ ಸೋಲು ಅದನ್ನೋದುವ ತಲೆಮಾರುಗಳ ದಿಕ್ಕು ತಪ್ಪಿಸಿದೆ ಮತ್ತು ಅದರ ಪರಿಣಾಮವನ್ನು ನಾವೀಗ ಅನುಭವಿಸುತ್ತಿದ್ದೇವೆ. ಅವರ ಸಾವಿರಾರು ವಚನಗಳೇ ಅವರ ಬಹುಮುಖ ವ್ಯಕ್ತಿತ್ವವನ್ನು ಅನಾವರಣಗೊಳಿಸಿವೆ. ಅವರು ಕೇವಲ ಭಕ್ತಿ ಭಂಡಾರಿಯಲ್ಲ ಅವರಲ್ಲೊಬ್ಬ ನಿಜವಾದ... 1. ಸಮಾಜವಾದಿ 2. ಜಾತ್ಯಾತೀತವಾದಿ 3. ಮಾನವತಾವಾದಿ 4. ಸ್ತ್ರೀವಾದಿ 5. ವಿಚಾರವಾದಿ 6. ಸಮಾಜ ಶಾಸ್ತ್ರಜ್ಞ 7. ರಾಜ್ಯ ಶಾಸ್ತ್ರಜ್ಞ 8. ಪ್ರಜಾಪ್ರಭುತ್ವವಾದಿ 9. ಕಾಯಕಯೋಗಿ 10. ಕನ್ನಡಾಭಿಮಾನಿ 11.ಸಮಾನತಾವಾದಿ 12.ಉದಾರತಾ...

'ಕನ್ನಡದ ಕಸ್ತೂರಿ,ಹೊಸಗನ್ನಡದ ಬೆಳ್ಳಿಚುಕ್ಕಿ-ಮುದ್ದಣ'(24 ಜನೇವರಿ 1870ರಿಂದ 1901)

ಸಾಹಿತ್ಯವೇ ಜೀವನ ಎಂಬಂತೆ ಬದುಕಿದ, ಸಾಹಿತ್ಯಕ್ಕಾಗಿ ಈ ಶರೀರ ಎಂಬಂತೆ ಬಾಳಿದ, ಕನ್ನಡ ಸಾಹಿತ್ಯ ಜಗತ್ತಿನಲ್ಲಿ ಪ್ರಾಚೀನತೆ-ಆಧುನಿಕತೆಗಳ ಸೇತುವೆಯೆಂದೂ, ಹೊಸಗನ್ನಡದ ಬೆಳ್ಳಿಚುಕ್ಕಿ, ನವೋದಯದ ಮುಂಗೋಳಿ,  ಹೊಸಗನ್ನಡದ ಕಾವ್ಯೋದ್ಯಾನದಲ್ಲಿ ಮೊದಲು ಕೂಗಿದ ಕೋಗಿಲೆಯೆಂದು ಕೊಂಡಾಡಲ್ಪಟ್ಟ ಕನ್ನಡಿಗರ ಹೆಮ್ಮೆಯ ಕವಿ "ಮುದ್ದಣ" ಎಂಬ ಮುದ್ದಾದ ಕಾವ್ಯನಾಮದಿಂದಲೇ ಪರಿಚಿತನಾದ ನಂದಳಿಕೆ ಲಕ್ಷ್ಮೀ ನಾರಾಯಣನ ಬಗ್ಗೆ ಬರೆಯಲು ಅತೀವವಾದ ಹೆಮ್ಮೆ ಎನಿಸುತ್ತದೆ.  24ನೇ ಜನೇವರಿ 1870 ರಂದು ಇಂದಿನ ದಕ್ಷಿಣ ಕನ್ನಡ ಜಿಲ್ಲೆಯ ಕಾರ್ಕಳ ತಾಲ್ಲೂಕಿನ ನಂದಳಿಕೆಯಲ್ಲಿ ಮುದ್ದಣ ಜನಿಸಿದ.  ತಂದೆ ತಮ್ಮಯ್ಯ, ತಾಯಿ ಮಹಾಲಕ್ಷ್ಮೀ, ತುಂಬ ಬಡಕುಟುಂಬ. ಮುದ್ದಣನ ನಿಜನಾಮ ಲಕ್ಷ್ಮೀನಾರಾಯಣ , ಬಾಲ್ಯದಲ್ಲಿ ಮುದ್ದಿನಿಂದ ಮುದ್ದಣ ಎಂದೇ ಕರೆಯುತ್ತಿದ್ದರು. ಬಾಲ್ಯದಲ್ಲಿ ಆತನಿಗೆ ಯಕ್ಷಗಾನ, ಹರಿಕಥೆ, ಸಂಗೀತಗಳಲ್ಲಿ ಅತೀಯಾದ ಪ್ರೀತಿ. ಇವೆಲ್ಲ ಅತೀರೇಖಗಳಿಂದ ತಂದೆಯಿಂದ ಏಟುಗಳನ್ನೂ ತಿನ್ನುತ್ತಿದ್ದ. ಇವೆಲ್ಲ ಆಸಕ್ತಿಗಳೊಂದಿಗೆ ಓದಿನಲ್ಲೂ ಮುಂದಿದ್ದ. ಕಿತ್ತು ತಿನ್ನುವ ಬಡತನದಿಂದಾಗಿ ಪ್ರಾಥಮಿಕ ಶಿಕ್ಷಣದ ನಂತರ ಶಾಲೆ ಬಿಟ್ಟ. ಅಂದು ಮುಂದಿನ ವಿದ್ಯಾಭ್ಯಾಸಕ್ಕೆ ಉಡುಪಿಗೆ ಹೋಗಬೇಕಿತ್ತು, ಒಂದು ಹೊತ್ತಿನ ಊಟಕ್ಕೂ ತತ್ವಾರ ಪಡುವ ಕುಟುಂಬಕ್ಕೆ ಆಸಕ್ತಿಯಾಗಲಿ ಆ ಶಕ್ತಿಯಾಗಲಿ ಇರಲಿಲ್ಲ. ಕೆಲ ದಿನ ಕೂಲಿ ಕೆಲಸ ಮಾಡಿದ ಆತನಲ್ಲಿ ಮತ್ತೇ ಕಲಿಯಬೇಕೆಂಬ ...

Five Monkeys In The Cage (Management Story)

A group of scientists placed five monkeys in a cage and in the middle, a ladder with bananas on the top. Every time a monkey went up the ladder, the scientists soaked the rest of the monkeys with cold water. After a while, every time a monkey went up the ladder, the others beat up the one on the ladder. After some time, no monkey dare to go up the ladder regardless of the temptation. Scientists then decided to substitute one of the monkeys. The first thing this new monkey did was to go up the ladder. Immediately the other monkeys beat him up. After several beatings, the new member learned not to climb the ladder even though never knew why. Then second monkey was substituted and the same occurred, the first monkey participated on the beating for the second monkey. Then third was changed and the same was repeated. Then fourth and five was replaced and beating was repeated. What was left was a group of five monkeys that even though never received a cold shower, continued...

ಭಾರತೀಯ ಸಮಾಜಕಾರ್ಯ ಶಿಕ್ಷಣದ ಪ್ರಸ್ತುತ ಸಮಸ್ಯೆಗಳು

ಪೀಠಿಕೆ:  ಸಮಾಜಕಾರ್ಯ ಕೇವಲ ಒಂದು ವೃತ್ತಿ ಮಾತ್ರವಾಗಿರದೇ ಅದೊಂದು ಶೈಕ್ಷಣಿಕ ಜ್ಞಾನ ಶಾಖೆಯೂ ಆಗಿದೆ. ಸಮಾಜಕಾರ್ಯ ವೃತ್ತಿಯ ಯಶಸ್ಸು, ಸಮಾಜ ಕಾರ್ಯಕರ್ತನಾದವನು ತರಬೇತಿಯ ವೇಳೆ ಎಷ್ಟರ ಮಟ್ಟಿಗೆ ಅದನ್ನು ಸೈದ್ಧಾಂತಿಕವಾಗಿ, ಪ್ರಾಯೋಗಿಕವಾಗಿ ಅರ್ಥೈಸಿಕೊಂಡು, ಅಳವಡಿಸಿಕೊಳ್ಳುತ್ತಾನೆ ಎಂಬುದರ ಮೇಲೆ ಅವಲಂಬಿತವಾಗಿರುತ್ತದೆ. ಸಮಾಜಕಾರ್ಯ ಶಿಕ್ಷಣ ಮೂಲತಃ ಪಾಶ್ಚಾತ್ಯರ ಕೊಡುಗೆಯಾದ್ದರಿಂದ ಭಾರತದ ಸಂದರ್ಭದಲ್ಲಿ ಅದರ ಅನ್ವಯಿಸುವಿಕೆ ದೇಶೀಕರಣಗೊಂಡಿಲ್ಲ. ಸಮಾಜಕಾರ್ಯ ಶಿಕ್ಷಣ ಪರಿಚಿತವಾಗಿ ಎಂಟು ದಶಕಗಳೇ ಕಳೆದಿರುವ ಈ ಹೊತ್ತಿನಲ್ಲಿ ಅದು ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಆತ್ಮಾವಲೋಕನ ಅಗತ್ಯ  ಮತ್ತು ಅನಿವಾರ್ಯವಾಗಿದೆ. ಸಮಸ್ಯೆಗಳನ್ನು ಪರಿಹರಿಸುವ ವಿಧಾನಗಳಿಗೆ ದಾರಿ ತೊರಿಸುವ ಸಮಾಜಕಾರ್ಯ ಶಿಕ್ಷಣವೇ ಸಮಸ್ಯೆಗಳ ಸುಳಿಗೆ ಸಿಲುಕುತ್ತಿರುವುದು ಕಳವಳಕಾರಿ ಸಂಗತಿ. ಈ ನಿಟ್ಟಿನಲ್ಲಿ ‘ಸಮಾಜ ಕಾರ್ಯ ಶಿಕ್ಷಣದ ಪ್ರಸ್ತುತ ಸಮಸ್ಯೆಗಳ’ ಕುರಿತಾದ ಪ್ರಬಂಧ ಮಂಡನೆ, ಬೆಳಕು ಚೆಲ್ಲುವ ಒಂದು ಚಿಕ್ಕ ಪ್ರಯತ್ನವಾಗಿದೆ. ಭಾರತದಲ್ಲಿ ಸಮಾಜಕಾರ್ಯ ಶಿಕ್ಷಣದ ವಿಕಾಸ ಪ್ರೊ. ಸಂಜಯ ಭಟ್ಟ ಬಹಳ ಸ್ಪಷ್ಟವಾಗಿ ಭಾರತದಲ್ಲಿನ ಸಮಾಜಕಾರ್ಯ ಶಿಕ್ಷಣದ ವಿಕಾಸವನ್ನು ಈ ಕೆಳಗಿನ ಹಂತಗಳಲ್ಲಿ ವರ್ಗೀಕರಿಸಿದ್ದಾರೆ. 1.ಪ್ರಾರಂಭದ ಹಂತ(1936-46): ಈ ಹಂತ ಭಾರತದ ಪ್ರಪ್ರಥಮ ಸಮಾಜಕಾರ್ಯ ಶಾಲೆಯಾದ ‘ಸರ್ ದೊರಾಬ್ಜಿ ಟಾಟಾ ಗ್ರ್ಯಾಜುಯೇಟ್ ಸ್...